ಭುವನೇಶ್ವರ: ಒರಿಸ್ಸದಲ್ಲಿ ನಿನ್ನೆ ಡೀಸೆಲ್ ಬೆಲೆಯಲ್ಲಿ ದೇಶದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯೊಂದು ಬರೆಯಲ್ಪಟ್ಟಿದೆ. ಭಾರತದಲ್ಲಿ ಮೊತ್ತಮೊದಲ ಬಾರಿಗೆ ಪೆಟ್ರೋಲ್ ಬೆಲೆಯನ್ನು ಡೀಸೆಲ್ ಮೀರಿತು. ಒಂದು ಲೀಟರ್ ಡೀಸೆಲ್‍ಗೆ ಪೆಟ್ರೋಲಿಗಿಂತ ಹನ್ನೆರಡು ಪೈಸೆ ಹೆಚ್ಚು ನಿನ್ನೆ ಪಡೆಯಲಾಗಿದೆ. ಪ್ರತಿದಿನ ಪೆಟ್ರೋಲ್, ಡೀಸೆಲ್‍ಗಳ ಬೆಲೆಯಲ್ಲಿ ಏರು ಪೇರು ನಡೆಯುತ್ತಿದೆಯಾದರೂ ಯಾವತ್ತು ಪೆಟ್ರೋಲಿಗಿಂತ ಡೀಸೆಲ್ ಬೆಲೆ ಅಧಿಕಗೊಂಡದ್ದು ದೇಶದ ಇತಿಹಾಸದಲ್ಲಿಲ್ಲ.

ನಿನ್ನೆ ಭುವನೇಶ್ವರದಲ್ಲಿ ಡೀಸೆಲನ್ನು ಪೆಟ್ರೋಲಿಗಿಂತ ಹೆಚ್ಚು ಬೆಲೆಗೆ ಮಾರಟಮಾಡಲಾಗಿದೆ ಎಂದು ವರದಿಯಾಗಿದೆ. ಪೆಟ್ರೋಲು ಲೀಟರೊಂದಕ್ಕೆ 80.65 ಪೈಸೆ ಆಗಿದ್ದರೆ ಡೀಸೆಲ್‍ಗೆ 80.78 ಪೈಸೆ ನಿನ್ನೆಯ ದರ ಆಗಿದೆ.

ಒರಿಸ್ಸದ ಸರಕಾರ ಇಂಧನ ದ ಮೇಲೆ ಏಕರೀತಿಯ ತೆರಿಗೆಯನ್ನು ಹಾಕುತ್ತದೆ. ಆದರೆ ಇತರ ರಾಜ್ಯಗಳಲ್ಲಿ ಹೀಗೆ ತೆರಿಗೆ ವಸೂಲು ಮಾಡಲಾಗುವುದಿಲ್ಲ. ಒರಿಸ್ಸಾದಲ್ಲಿ ಮಾತ್ರ ಪೆಟ್ರೋಲ್ ಡೀಸೆಲ್‍ಗಳಿಗೆ ಸಮಾನ ರೀತಿಯ ತೆರಿಗೆಯಿದೆ. ಒರಿಸ್ಸದಲ್ಲಿ ಪೆಟ್ರೋಲ್, ಡೀಸೆಲ್‍ಗೆ ಶೆ.26ರಷ್ಟು ವ್ಯಾಟ್ ತೆರಿಗೆ ಹಾಕಲಾಗುತ್ತದೆ. ದರ ಹೆಚ್ಚಳದ ಬಳಿಕ ಡೀಸೆಲ್ ಬಳಕೆಯಲ್ಲಿ ಇಳಿಕೆಯಾಗಿದೆ ಎಂದು ಡೀಲರ್‍ಗಳು ಹೇಳುತ್ತಿದ್ದಾರೆ.

Leave a Reply