ಬೇಕಾಗುವ ಸಾಮಗ್ರಿಗಳು:

ಮೀನು – 1 ಕೆ.ಜಿ ಸಿರ್ಕ (ವಿನೆಗರ್) 1 ಚಮಚ ಉಪ್ಪು, ಅರಶಿನ ಹುಡಿ
ಸಿರ್ಕ, ಉಪ್ಪು, ಅರಶಿನ ಹುಡಿ, ನೀರಿನೊಂದಿಗೆ ಮೀನನ್ನು ಬೇಯಿಸಿ ಮುಳ್ಳುಗಳನ್ನು ಬೇರ್ಪಡಿಸಿ ಇಡಿ…

ಪೇಸ್ಟ್ ಮಾಡಲು:
ಬೆಳ್ಳುಳ್ಳಿ – 6-8 ಎಸಳುಗಳು
ಶುಂಠಿ – 1 ಇಂಚು
ಕೆತ್ತೆ – 2 ಇಂಚು
ಲವಂಗ – 2 ಇವುಗಳನ್ನು ಪೇಸ್ಟ್ ಮಾಡಿ ತೆಗೆದಿಡಿ
ಬಟಾಟೆ – 3
ಕಾಯಿಮೆಣಸು -5
ನೀರುಳ್ಳಿ – 3
ಕರಿಮೆಣಸು ಹುಡಿ – 1 ಚಮಚ
ಕೆಂಪು ಮೆಣಸಿನ ಹುಡಿ – 1 ಚಮಚ
ಅರಶಿನ ಹುಡಿ – 1/3 ಚಮಚ
ಬಡೆ ಸೊಪ್ಪು (ಸೋಂಪು) – 1 ಚಮಚ

ಮಾಡುವ ವಿಧಾನ:-

ಫ್ರೈ ಪ್ಯಾನ್‌ನಲ್ಲಿ ಎಣ್ಣೆ ಬಿಸಿಮಾಡಿ ಕೊಚ್ಚಿದ ನೀರುಳ್ಳಿ ಹಾಕಿ ಟ್ರೈ ಮಾಡಿ, ನಂತರ ಕೊಚ್ಚಿದ ಕಾಯಿ ಕಾಯಿಮೆಣಸು ಹಾಕಿ ಕದಡಿರಿ. ಮುಳ್ಳು ತೆಗೆದ ಮೀನನ್ನು ಹಾಕಿ ಅದರೊಂದಿಗೆ ಬೇಯಿಸಿ ಹಿಚುಕಿದ ಬಟಾಟೆಯನ್ನು ಹಾಕಿ, ಉಪ್ಪು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಕಟ್ಲೇಟ್ ಆಕಾರದಲ್ಲಿ ಒತ್ತಿ ಕಲಸಿದ ಮೊಟ್ಟೆಗೆ ಟೋಸ್ಟ್ ಹುಡಿ ಅಥವಾ ರವೆಗೆ ಹೊರಳಿಸಿ ಎಣ್ಣೆಯಲ್ಲಿ ಫೈ ಮಾಡಿರಿ. ಸಾಸ್‌ನೊಂದಿಗೆ ಸವಿಯಲು ಕೊಡಿ.

Leave a Reply