ಕೇರಳ: ಮೀನು ಮಾರಿ ಜನರ ಗಮನ ಸೆಳೆದ ವಿದ್ಯಾರ್ಥಿನಿ ಹನಾನ್ ಹಮೀದ್‍ಗೆ ಉದ್ದೇಶಪೂರ್ವಕ ಅಪಘಾತ ನಡೆಸಲಾಗಿತ್ತೇ ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತನಿಖೆಯಲ್ಲಿ ಅಪಘಾತ ಅನಿರೀಕ್ಷಿತ ಮತ್ತು ಉದ್ದೇಶಪೂರ್ವವಾಗಿ ನಡೆಸಲಾಗಿಲ್ಲ ಎಂದು ಕೊತಪರಂಬ್ ಮದಿಲಗಂ ಪೊಲೀಸರು ಹೇಳಿದರು.
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹನಾನ್ ಅಘಾತದ ಕುರಿತು ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ ಆರಂಭಗೊಂಡಿದೆ. ಮದಿಲಗಂ ಠಾಣಾ ವ್ಯಾಪ್ತಿಯ ಕೊತಪರಂಬ್ ಎಂಬಲ್ಲಿಸೆಪ್ಟಂಬರ್ ಮೂರರಂದು ಮುಂಜಾನೆ ಅಪಘಾತ ನಡೆದಿತ್ತು.
ಕೋಝಿಕ್ಕೋಡ್‍ನಲ್ಲಿ ನಡೆದಿದ್ದ ಉದ್ಘಾಟನಾ ಕಾರ್ಯಕ್ರಮದಿಂದ ಮರಳುತ್ತಿದ್ದ ಸಂದರ್ಭದಲ್ಲಿ ಹನಾನ್‍ರಿದ್ದ ಕಾರು ವಿದ್ಯುತ್ ಕಂಭಕ್ಕೆ ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಹನಾನ್‍ರ ಬೆನ್ನೆಲುಬಿಗೆ ಪೆಟ್ಟಾಗಿದೆ. ಜಿತೇಶ್‍ಕುಮಾರ್ ಎಂಬವರು ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಜಿತೇಶ್‍ಕುಮಾರ್ ಗೆ ಹೆಚ್ಚಿನಗಾಯಗಳಾಗಿರಲಿಲ್ಲ. ಹನಾನ್‍ರನ್ನು ಮೊದಲು ಕೊಡುಂಗಲ್ಲೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಎರ್ನಾಕುಳಂ ಮೆಡಿಕಲ್ ಕಾಲೇಜಿನಲ್ಲಿ ಸರ್ಜರಿ ನಡೆಸಲಾಗಿದ್ದು ಹನಾನ್ ಗುಣಮುಖರಾಗುತ್ತಿದ್ದಾರೆ.
ಅಪಘಾತ ಮನಪೂರ್ವಕ ಮಾಡಲಾಯಿತೇ ಎನ್ನುವ ಸಂದೇಹವನ್ನು ಹನಾನ್ ವ್ಯಕ್ತಪಡಿಸಿದ್ದು ವರದಿಯಾಗಿತ್ತು. ಓರ್ವ ಆನ್‍ಲೈನ್ ಪತ್ರಕರ್ತ ಮತ್ತು ಚಾಲಕನ ನಡವಳಿಕೆಯಲ್ಲಿ ಹನಾನ್ ಸಂದೇಹ ವ್ಯಕ್ತಪಡಿಸಿದ್ದಾರೆ. ಓರ್ವ ಸೆಲೆಬ್ರಿಟಿ ವ್ಯಕ್ತಪಡಿಸಿದ ಶಂಕೆ ಎಂಬ ನೆಲೆಯಲ್ಲಿ ಅದನ್ನು ಮದಿಲಗಂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು,ಹನಾನ್‍ರಿಂದ ಹೇಳಿಕೆಯನ್ನು ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.
ಅಪಘಾತವನ್ನುಚಾಲಕ ಪ್ರಜ್ಞಾಪೂರ್ವಕವಾಗಿ ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ. ಸಾಧಾರಣವಾಗಿ ಚಾಲಕರುಸ್ವಯಂ ಅಪಘಾತ ಮಾಡುವ ಸಾಧ್ಯತೆ ಇರುವುದಿಲ್ಲ. ಅಪಘಾತವಾದರೆ ಅವರಿಗೂ ಅಪಾಯವಾಗುತ್ತದೆ. ಆದ್ದರಿಂದ ಸ್ವತಃ ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿಸುವುದು ಅಷ್ಟು ಸುಲಭದಲ್ಲಿ ಸಮರ್ಥಿಸಿಕೊಳ್ಳುವವಿಷಯವಲ್ಲ ಅಪಘಾತದಲ್ಲಿ ಹಾನಿಗೀಡಾದ ಕಾರು ಮತ್ತು ವಿದ್ಯುತ್ ಎರಡನ್ನೂ ಜಿತೇಶ್ ಕುಮಾರ್ ದುರಸ್ತಿಪಡಿಸಿಕೊಟ್ಟಿದ್ದರು.ಹೀಗಾಗಿ ಚಾಲಕ ಮನಪೂರ್ವಕ ಅಪಘಾತ ಮಾಡಿರಲಿಕ್ಕಿಲ್ಲ್ಲ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಸೆಲಬ್ರಿಟಿಯ ದೂರು ನಾಳೆ ಯಾವ ರೀತಿಯಲ್ಲಿಯೂ ತಿರು ಮಂತ್ರವಾಗುವ ಸಾಧ್ಯತೆಯಿದೆ ಎಂದು ಅರಿತ ಪೊಲೀಸರು ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿದ ನಂತರ ಪ್ರಕರಣವನ್ನುಕೊನೆಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.