ಬೇಕಾಗುವ ಪದಾರ್ಥಗಳು:
ಪಾಲಕ ಸೊಪ್ಪು -ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿದ್ದು,ಒಂದು ಕಟ್ಟು
ತೊಗರೀಬೇಳೆ, ಒಂದು ಬಟ್ಟಲು
ಹಸಿಮೆಣಸಿನಕಾಯಿ 2-3
ಕಾಯಿ ತುರಿ- ಅರ್ಧ ಬಟ್ಟಲು
ಒಗ್ಗರಣೆಗೆ ಎಣ್ಣೆ, ಸಾಸಿವೆ – ಅರಿಷಿಣ ಇಂಗು, ರುಚಿಗೆ ಉಪ್ಪು

ಮಾಡುವ ವಿಧಾನ: ತೊಗರೀಬೇಳೆ ಬೇಯಿಸಿಕೊಳ್ಳಿ. ಎಣ್ಣೆ ಸಾಸಿವೆ, ಇಂಗು ಒಗ್ಗರಣೆ ಮಾಡಿ. ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹೆಚ್ಚಿದ ಪಾಲಕ್ ಸೊಪ್ಪು, ಅರಿಶಿನ ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು. ಬೆಂದ ಸೊಪ್ಪಿಗೆ ಬೆಂದ ಬೇಳೆ ಸೇರಿಸಿ. ಕಾಯಿತುರಿಯನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿ ಬೆಂದ ಮಿಶ್ರಣಕ್ಕೆ ಸೇರಿಸಿ, ಅರ್ಧ ಹೋಳು ನಿಂಬೆ ರಸ ಹಿಂಡಿ, ಆರೋಗ್ಯದಿಂದ ಕೂಡಿದ ಪಾಲಕ ತವ್ವೆ ಊಟಕ್ಕೆ ತಯಾರಾಗುವದು. ಉಪಯೋಗ- ವಿಟಾಮಿನಯುಕ್ತ ಪಾಲಕ ತವ್ವೆ ಜ್ವರ ಬಂದಾಗ, ಬಾಣಂತಿಯರಿಗೆ ಮಕ್ಕಳಿಗೆ ಬಹಳ ಒಳ್ಳೆಯದು.

LEAVE A REPLY

Please enter your comment!
Please enter your name here