• ಬೇಕಾಗುವ ಸಾಮಗ್ರಿಗಳು:

ಪಾಸ್ತ- 200 ಗ್ರಾಮ್, ಮರ್ವಾಯಿ ಮಾಂಸ- 50 ಗ್ರಾಮ್, ಸಿಗಡಿ- 50 ಗ್ರಾಮ್, ಏಡಿ ಮಾಂಸ- 50
ಗ್ರಾಮ್, ಪಾಲಕ್ ಸೊಪ್ಪು- 50 ಗ್ರಾಮ್, ಚೀಸ್ (ಚೆಡ್ಡಾರ್)- 200 ಗ್ರಾಮ್.

  • ಸಾಸ್ ತಯಾರಿಸಲು:

ಮೈದ- 50 ಗ್ರಾಮ್, ಬೆಣ್ಣೆ- 50 ಗ್ರಾಮ್, ಹಾಲು1/2 ಲೀಟರ್, ಉಪ್ಪು- ರುಚಿಗೆ, ಜಾಯಿಪತ್ರೆ ಹುಡಿ10 ಗ್ರಾಮ್.

  • ತಯಾರಿಸುವ ವಿಧಾನ:
  • ಪಾಸ್ತ ಬೇಯಿಸಿ ತೆಗೆದಿಡಿ. * ಮರ್ವಾಯಿ ಮಾಂಸ, ಸಿಗಡಿ, ಏಡಿ ಮಾಂಸ ಬೇಯಿಸಿ (ಒಟ್ಟಿಗೆ ಬೇಯಿಸಬಾರದು).
  • ಒಂದು ಪ್ಯಾನ್ ಒಲೆಯಲ್ಲಿಟ್ಟು ಬೆಣ್ಣೆ ಕರಗಿಸಿ ಮೈದ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕಲಸಿ. ಕುದಿ ಬಂದಾಗ ತುರಿದಿಟ್ಟ ಚೀಸ್, ಉಪ್ಪು, ಜಾಯಿಪತ್ರೆ ಪುಡಿ ಸೇರಿಸಿ. ಉರಿಯಿಂದ ಕೆಳಗಿಳಿಸಿ. ಬೇಯಿಸಿದ ಸೀ ಫುಡ್‍ಗಳನ್ನು ಪಾಸ್ತದೊಂದಿಗೆ ಮಿಕ್ಸ್‍ಮಾಡಿ.
  • ಓವನ್ ಅನ್ನು 350 ಡಿಗ್ರಿಯಲ್ಲಿ 10 ನಿಮಿಷ ಪ್ರಿ ಹೀಟ್ ಮಾಡಿಕೊಳ್ಳಿ.
  • ಪಾಸ್ತ ಒಂದು ಬೇಕಿಂಗ್ ಪಾತ್ರೆಯಲ್ಲಿ ಹಾಕಿ. 15 ನಿಮಿಷ ಬೇಕ್ ಮಾಡಿ.
  • ಓವನ್‍ನಿಂದ ಹೊರತೆಗೆದು1/4 ಕಪ್ ತುರಿದ  ಮೊಝರೆಲ್ಲ ಚೀಸ್ ಹರಡಿ 10 ನಿಮಿಷ ಪುನಃ ಬೇಕ್ ಮಾಡಿ. ಬಿಸಿಯಾಗಿ ಸವಿಯಿರಿ

Leave a Reply