ಪದಾರ್ಥಗಳು:  ಒಂದು ಬಟ್ಟಲು ಬೆಂದ ತೊಗರಿಬೇಳೆ, ಎರಡು ಕಟ್ಟು ಸಬ್ಬಸಿಗೆ ಸೊಪ್ಪು ಬಿಡಿಸಿ ತೊಳೆದು ಹೆಚ್ಚಿದ್ದು, ಕಡಲೆ ಬೇಳೆ 2 ಚಮಚ, ಉದ್ದಿನ ಬೇಳೆ 2 ಚಮಚ, ಧನಿಯಾ 2 ಚಮಚ, 5-6 ಬ್ಯಾಡಗಿ ಮೆಣಸಿನಕಾಯಿ, ಕಪ್ಪು ಮೆಣಸು 8-10 ಕಾಳು, ಚಕ್ಕೆ 2-3 ತುಂಡು, ಲವಂಗ 3-4, ಇಂಗು, ಹಸಿ ಕೊಬ್ಬರಿ ಅಥವಾ ಒಣಕೊಬ್ಬರಿ 1 ಬಟ್ಟಲು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಷಿಣಪುಡಿ.

ಮಾಡುವ ವಿಧಾನ : ಕಡ್ಲೆಬೇಳೆ, ಉದ್ದಿನಬೇಳೆ, ಧನಿಯಾ ಕೆಂಪಗೆ ಹುರಿದು ಚಕ್ಕೆ, ಲವಂಗ, ಮೆಣಸು ಹುರಿದು, ಮೆಣಸಿನಕಾಯಿ ಕೊಬ್ರಿ ತುರಿ ಬೆಚ್ಚಗೆ ಮಾಡಿ ಮಿಕ್ಸಿಯಲ್ಲಿ ಪುಡಿ ಅಥವಾ ನೀರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ, ಹೆಚ್ಚಿದ ಸಬ್ಬಸಿಗೆ ಸೊಪ್ಪನ್ನು ಒಗ್ಗರಣೆಗೆ ಹಾಕಿ ಸ್ವಲ್ಪ ನೀರು ಉಪ್ಪಿನೊಂದಿಗೆ ಬೇಯಿಸಿ. ಬೆಂದ ಸೊಪ್ಪಿಗೆ ಬೇಳೆ ಬೆರೆಸಿ ಚೆನ್ನಾಗಿ ಕುದಿಸಿ ರುಬ್ಬಿದ ಪುಡಿ ಅಥವಾ ಪೇಸ್ಟ್ ಅಡುಗೆ ಸೇರಿಸಿ. ಇದಕ್ಕೆ ನಮಗೆ ಬೇಕಾದಷ್ಟು ನೀರು ಈ ( ಬೆರೆಸಿ. ಬೇಕಾದರೆ ತುಂಡು ಬೆಲ್ಲ ಸೇರಿಸಿ ಕುದಿಸಿದರೆ ಸಬ್ಬಸಿಗೆ ಕೂಟು ತಯಾರು.

LEAVE A REPLY

Please enter your comment!
Please enter your name here