ಬೇಕಾಗುವ ಸಾಮಗ್ರಿಗಳು:

ಚಿಕನ್- 1 ಕಿಲೋ, ಈರುಳ್ಳಿ- 2, ಟೊಮೆಟೊ- 1, ಹಸಿಮೆಣಸಿನ ಕಾಯಿ- 3, ಶುಂಠಿ- ಒಂದು ತುಂಡು, ಬೆಳ್ಳುಳ್ಳಿ- 10
ಎಸಳು, ಕರಿಬೇವಿನ ಎಲೆ- ಎರಡು ಎಸಳು, ಗೋಡಂಬಿ- 25, ಒಣದ್ರಾಕ್ಷೆ- 2 ಟೀ.ಸ್ಪೂ., ಹಳದಿಹುಡಿ- 1 ಟೀ.ಸ್ಪೂ., ಕಶ್ಮೀರಿ ಮೆಣಸಿನ
ಹುಡಿ- 1 ಟೀ.ಸ್ಪೂ., ಗರಮ್ ಮಸಾಲೆ ಹುಡಿ- 1.1/2 ಟೀ.ಸ್ಪೂ., ಕೊತ್ತಂಬರಿ ಸೊಪ್ಪು 1.1/2
ಟೀ.ಸ್ಪೂ., ಉಪ್ಪು- ರುಚಿಗೆ, ತೆಂಗಿನ ಎಣ್ಣೆ- ಅವಶ್ಯಕತೆಗೆ, ಸಕ್ಕರೆ- ಒಂದು ಚಿಟಿಕೆ, ಸಾಸಿವೆ1/2ಟೀ.ಸ್ಪೂ., ಕೊತ್ತಂಬರಿಹುಡಿ1 ಟೀ.ಸ್ಪೂ.

ತಯಾರಿಸುವ ವಿಧಾನ:

 • ಕೋಳಿಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ ತೊಳೆದಿಟ್ಟುಕೊಳ್ಳಿ.
 • ಈರುಳ್ಳಿ, ಟೊಮೆಟೊ, ಶುಂಠಿ ಸಣ್ಣ ತುಂಡುಗಳನ್ನಾಗಿ ಮಾಡಿ.
 • ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಉದ್ದಕ್ಕೆ ಕತ್ತರಿಸಿ.
 • 15 ಗೋಡಂಬಿ ಅರೆದಿಟ್ಟುಕೊಳ್ಳಿ.
 • ಸ್ವಲ್ಪ ಗರಮ್‍ಮಸಾಲೆ ಹಳದಿಹುಡಿ, ಉಪ್ಪು ಇದನ್ನು ಮಿಕ್ಸ್ ಮಾಡಿ ಕೋಳಿ ತುಂಡುಗಳ ಮೇಲೆ ಸವರಿ ಇಡಿ.
 • ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ತೆಂಗಿನೆಣ್ಣೆ ಹಾಕಿ ಇದಕ್ಕೆ ಗೋಡಂಬಿ ಒಣದ್ರಾಕ್ಷೆ ಸೇರಿಸಿ ಹುರಿದು ತೆಗೆಯಿರಿ.
  ಇದೇ ಎಣ್ಣೆಗೆ ಸಾಸಿವೆ ಹಾಕಿ ಸಿಡಿಸಿ.

 • ಈರುಳ್ಳಿ ತುಂಡುಗಳನ್ನು ಹಾಕಿ ಬಾಡಿಸಿ. ಟೊಮೆಟೊ ಸೇರಿಸಿ ಕರಿಬೇವಿನ ಎಲೆಹಾಕಿ. ಸ್ವಲ್ಪ ಉಪ್ಪು, ಹಳದಿಹುಡಿ, ಕೊತ್ತಂಬರಿ ಹುಡಿ, ಗರಮ್ ಮಸಾಲ ಹುಡಿ ಹಾಕಿ ಚೆನ್ನಾಗಿ ಹುರಿಯಿರಿ.

 • ಇದಕ್ಕೆ ಮಸಾಲೆ ಒರೆಸಿ ಇಟ್ಟ ಕೋಳಿ ತುಂಡುಗಳನ್ನು ಹಾಕಿ, ಸಕ್ಕರೆ, ಗೋಡಂಬಿ ಪೇಸ್ಟ್, ಉಪ್ಪು ಬೇಯಿಸಲು ಅಗತ್ಯವಿರುವಷ್ಟು
  ನೀರು ಸೇರಿಸಿ. ಪಾತ್ರೆ ಮುಚ್ಚಿ ಅರ್ಧಗಂಟೆ ಸಣ್ಣ ಉರಿಯಲ್ಲಿ ಬೇಯಿಸಿ.
 • ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಕೊನೆಯಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷೆ ಸೇರಿಸಿ ಬಡಿಸಿ

Leave a Reply