ವಿಷಯ ಸಣ್ಣದು. ಆದರೆ ಖುಷಿ ದೊಡ್ಡದು.

ಯಾಕೆಂದರೆ ಒಂದು ಪಾರ್ಸೆಲ್‌ ಕಳೆದುಕೊಂಡಿದ್ದೆ.‌ ಕಳೆದ ಜ.6 ಶನಿವಾರ ಮಂಗಳೂರಿನ ಕಚೇರಿಯ ಕೆಲಸ ಮುಗಿಸಿದ ನಂತರ ವೇಣೂರು ಕಡೆಗೆ ತೆರಳಲು ಸ್ಟೇಟ್ ಬ್ಯಾಂಕ್ ನಿಂದ ಧರ್ಮಸ್ಥಳ ಬಸ್ ಹತ್ತಿದ್ದೆ. ಕಾವಳಕಟ್ಟೆ NC ROAD ನಲ್ಲಿ Express ಬಸ್ ಗಳು ಸ್ಟಾಪ್ ನೀಡೋದರಿಂದ NC Road ಎಂದು ಟಿಕೆಟ್ ತೆಗೆಯುವಾಗ ಅಲ್ಲಿ Super Fast Express ಸ್ಟಾಪ್ ಇಲ್ಲ ಎಂದು ಕಂಡಕ್ಟರ್ ತಿಳಿಸಿದ್ದರಿಂದ Bc Road ನಲ್ಲಿ ಇಳಿದಿದ್ದೆ. ಶನಿವಾರ ತುಂಬಾ ರಶ್ ಇರುವ ಕಾರಣದಿಂದ ನನ್ನ ತಂದೆಯವರಿಗೆ ತೆಗೆದುಕೊಂಡ ಪಾರ್ಸೆಲ್ ಇಳಿಯುವ ಗಡಿಬಿಡಿಯಲ್ಲಿ ಮರೆತು ಬಿಟ್ಟೆ. ನೆನಪಾದಾಗ ಬಸ್ ನಿಲ್ದಾಣದಿಂದ ಬಿಟ್ಟಿತ್ತು.
ಬಳಿಕ ತಂದೆಯ ಮೂಲಕ ಪೂಂಜಾಲಕಟ್ಟೆಯಲ್ಲಿ ತೆಗೆಯಲು ತಿಳಿಸಿದರೂ ಕೂಡ ಸಾಧ್ಯ ಆಗಲಿಲ್ಲ.
ಬಳಿಕ ಧರ್ಮಸ್ಥಳ ಹಾಗೂ ಮಂಗಳೂರಿನ Ksrtc ಡಿಪೋನಲ್ಲಿ ವಿಚಾರಿಸಿದೆ. ನಾನು ಹತ್ತಿದ ಬಸ್ ಬೆಂಗಳೂರಿನ ಕಡೆಗೆ ಹೋಗಿರುವ ಬಗ್ಗೆ ಮಾಹಿತಿ ದೊರೆಯಿತು. ಇನ್ನು ಕಾಯೋದು ವೇಸ್ಟ್, ಸಿಗಲಿಕ್ಕಿಲ್ಲ ಅಂತ ಯೋಚಿಸಿದಾಗ ಹೊಳೆದದ್ದು ಅಂದಿನ ಟಿಕೆಟ್‌.

ಟಿಕೆಟ್ ಅನ್ನು ಹಿಡಿದುಕೊಂಡು ಲಾಲ್ ಬಾಗ್ ಡಿಪೋಗೆ ಹೋದಾಗ ಟಿಕೆಟ್ ನಲ್ಲಿ ಎಂಟರ್ ಆಗಿರುವ ಬಸ್ ಕಂಡಕ್ಟರ್ ನ PF ನಂಬರ್ ಮೂಲಕ ಅವರ ಅವರ ಹೆಸರನ್ನು ಪಡೆದು, ನಂಬರ್ ಪಡಕೊಂಡೆ.

ಬಳಿಕ ಮತ್ತಷ್ಟು ಹುಡುಕಿಕೊಂಡು ಹೋದಾಗ KSRTC ಡ್ರೈವರ್ ರಮೇಶ್ ಅನ್ನೋವವರ ನಂಬರ್ ದೊರೆಯಿತು. ಕಾಲ್ ಮಾಡಿ ವಿಚಾರಿಸಿದಾಗ “ಹೌದು. ಪಾರ್ಸೆಲ್ ಸಿಕ್ಕಿದೆ. ಲಾಲ್ ಬಾಗ್ ಡಿಪೋದಲ್ಲಿ ಇಟ್ಟಿದ್ದೀನಿ. ಬಂದು ತಗೊಂಡೋಗಿ” ಅಂದಾಗ….
ಮನಸ್ಸಿಗೊಂಥರ ಖುಷಿ.

ಕಳೆದುಕೊಂಡದ್ದು ಜನವರಿ 6ರಂದು.
ಸಿಕ್ಕಿದ್ದು ಜ. 11. ಐದು ದಿನಗಳ ನಂತರ…

KSRTC ಡ್ರೈವರ್ ರಮೇಶ್ ರವರು ಕರ್ತವ್ಯ ದಲ್ಲಿ ಇದ್ದಿದ್ದರಿಂದ ಮುಖತಃ ಭೇಟಿ ಸಾಧ್ಯವಾಗಲಿಲ್ಲ. ಅವರ ಕಚೇರಿಯಲ್ಲಿ ಸಣ್ಣ ಗಿಫ್ಟ್ ನೀಡಿ, ಮುಗುಳ್ನಗೆಯೊಂದಿಗೆ ಹಿಂದಿರುಗಿದೆ.

ಮನಸ್ಸು ಹೇಳಿತು…
ಅಲ್ ಹಮ್ದುಲಿಲ್ಲಾಹ್.
ಸ್ತುತಿ ಜಗದೊಡೆಯನಿಗೆ.

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ. ಕಷ್ಟ ಪಟ್ಟು ಸಂಪಾದಿಸಿದ ಯಾವುದೇ ಸಾಮಾಗ್ರಿಗಳು ಎಷ್ಟು ಸಮಯ ಕಳೆದರೂ ನಮ್ಮ ಬಳಿಗೆ ಬರುತ್ತೆ.

ನಿಮ್ಮ ಬಳಿ ಹಂಚೋಣ ಅನಿಸ್ತು.

ಇರ್ಷಾದ್ ವೇಣೂರ್

Leave a Reply