ಸಾಂದರ್ಭಿಕ ಚಿತ್ರ

ಪುಣೆ: ರಕ್ಷಕರೇ ರಾಕ್ಷಸರಾದರೆ ಜನ ಸಾಮಾನ್ಯರ ಪಾಡೇನು ಎಂಬಂಥ ಘಟನೆ ಪುಣೆಯಲ್ಲಿ ವರದಿಯಾಗಿದೆ. ನಾಲ್ಕು ಮಂದಿ ಸೈನಿಕರ ಓರ್ವ ದುರ್ಬಲ ಮಹಿಳೆಯ ಮೇಲೆ ಅತ್ಯಾಚಾರ
ಮಾಡಿದ ಆರೋಪ ಹೊರಿಸಲಾಗಿದೆ.

ಇಲ್ಲಿನ ಸೇನಾಸ್ಪತ್ರೆಯ ಪರಿಸರದಲ್ಲಿ ಭಿನ್ನ ಸಾಮರ್ಥ್ಯದ ಮಹಿಳೆಯನ್ನು (speech-impaired woman) ಅತ್ಯಾಚಾರ ಎಸಗಿದ ಘಟನೆಯಲ್ಲಿ ನಾಲ್ವರು ಸೈನಿಕರ ವಿರುದ್ಧ ಪುಣೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮೊದಲು ಯುವತಿ ಪುಣೆಯ ಪೊಲೀಸರಿಗೆ ದೂರು ನೀಡಿದ್ದರು ನಂತರ ಎನ್‍ಜಿವೊಂದಕ್ಕೂ ದೂರು ನೀಡಿದ್ದಾರೆ.

ಎನ್‍ಜಿವೊ ಮಹಿಳೆಯ ದೂರನ್ನು ರಕ್ಷಣಾ ಸಚಿವರಿಗೂ, ಸೇನಾ ಮುಖ್ಯಸ್ಥರಿಗೂ ಕಳುಹಿಸಿಕೊಟ್ಟಿದ್ದರು. ಅತ್ಯಾಚಾರ ಆರೋಪಿ ಸೈನಿಕರು ಸೈನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು.

Leave a Reply