ಪ್ಯಾರಿಸ್: ಫ್ರಾನ್ಸ್ ನಲ್ಲಿ ನಕಾಬ್ ನಿಷೇಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗವು ಪ್ರತಿಕ್ರಿಯಿಸಿದೆ.

ಫ್ರಾನ್ಸ್ ನಲ್ಲಿ ಮುಖ ಮರೆಸಿರುವ ವಸ್ತ್ರ ಧರಿಸಿದ್ದಕ್ಕಾಗಿ ಈರ್ವರು ಯುವತಿಯರ ವಿರುದ್ದ ಶಿಕ್ಷೆ ವಿಧಿಸಿದ ನಿರ್ಣಯವನ್ನು ಪ್ರಶ್ನಿಸಿದ ವಿಶ್ವ ಸಂಸ್ಥೆಯು ಈ ರೀತಿ ಪ್ರತಿಕ್ರಿಯಿಸಿದೆ.

ಫ್ರಾನ್ಸ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಕಾಬ್ ಧರಿಸುವುದರ ವಿರುದ್ಧ ನಿಷೇಧ ಹೇರಲಾಗಿದೆ. ಮಾತ್ರವಲ್ಲ ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿತ್ತು. ಇದರ ವಿರುದ್ಧ ಭಾರೀ ದೂರು ಕೇಳಿ ಬಂದಿತ್ತು. ಇದು ಒಂದು ಧರ್ಮದವರ ವಿಶ್ವಾಸದ ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧದ ನಡೆಯೆಂದು ವಿಶ್ವ ಸಂಸ್ಥೆ ಆರೋಪಿಸಿತ್ತು.

Leave a Reply