ಇದು ನಮ್ಮ ಊರು: ಕಳೆದ ಐದು ವರ್ಷಗಳಲ್ಲಿ ಮೂರು ರಾಜ್ಯಗಳ ಪೊಲೀಸರು ಮತ್ತು ದೊಡ್ಡ ಅಧಿಕಾರಿಗಳನ್ನು ಮರುಳು ಮಾಡುವ ಮೂಲಕ ಅನೇಕ ವಿವಿಐಪಿ ಸೌಲಭ್ಯಗಳನ್ನು ಪಡೆದು ಕೊಳ್ಳುತ್ತಿದ್ದ ಕೊಲೆಗಡುಕನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈ ಕೊಲೆಗಡುಕನಿಗೆ ಅನೇಕ ದರೋಡೆಕೋರರೊಂದಿಗೆ ಸಂಪರ್ಕ ವಿದೆ ಎನ್ನಲಾಗುತ್ತಿದ್ದು, ಈತನಿಗೆ ವಿಕಾಸ್ ದುಬೆ ಗ್ಯಾಂಗ್ ನೊಂದಿಗೂ‌ ಸಂಭಂಧವಿದೆ ಎನ್ನಲಾಗುತ್ತಿದೆ. ಪಾಪಾಲ ಗುರ್ಜರ್ ಗ್ಯಾಂಗ್‌ನ ಪ್ರಮುಖ ಸದಸ್ಯನೂ ಆಗಿರುವ ಗಜರಾಜ್ ಸಿಂಗ್ ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈತ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಪೊಲೀಸರನ್ನು ಮೋಸ ಮಾಡಿ ವಿವಿಐಪಿ ಸೌಲಭ್ಯ ಮತ್ತು ಪೊಲೀಸ್ ರಕ್ಷಣೆಯನ್ನು ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

ದೆಹಲಿಯ ಖಾನ್ಪುರದ ನಿವಾಸಿ ಗಜರಾಜ್ ಸಿಂಗ್ 8 ನೇ ಫೇಲ್ ಆಗಿದ್ದು, 2015 ರಿಂದ ಮೂರು ರಾಜ್ಯಗಳ ಪೊಲೀಸರನ್ನು ಮರುಳು ಮಾಡುವ ಮೂಲಕ ಪೊಲೀಸ್ ರಕ್ಷಣೆ ಮತ್ತು ವಿವಿಐಪಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದ. ಗಜರಾಜ್ ಸಿಂಗ್ ವಿವಿಐಪಿ ಸೌಲಭ್ಯ ಮತ್ತು ಪೊಲೀಸ್ ರಕ್ಷಣೆಯನ್ನು ಪಡೆಯುವ ಸಲುವಾಗಿ ಯುವ ಹಿಂದೂ ಪರಿಷತ್ ಮತ್ತು ಭಾರತ ಸರ್ಕಾರದ ಪಡಿತರ ವಿತರಣಾ ಮತ್ತು ಸಲಹಾ ಸಮಿತಿಯ ಸದಸ್ಯನೆಂದು ಲೆಟರ್ ಹೆಡ್ ತಯಾರಿಸಿ ಅದರ ಮೂಲಕ ರಾಜಸ್ಥಾನ-ಉತ್ತರ ಪ್ರದೇಶ-ಹರ್ಯಾಣ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು, ಮುಖ್ಯ ಕಾರ್ಯದರ್ಶಿಗಳು ಮತ್ತು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ವಿವಿಐಪಿ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here