ಚಳಿಗಾಲದಲ್ಲಿ ಮೊಸರು ತಿನ್ನಬಹುದೇ/ತಿನ್ನಬಾರದೇಎಂಬ ಬಗ್ಗೆ ಅನೇಕ ಜನರ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತದೆ. ಚಳಿಗಾಲದಲ್ಲಿ ಮೊಸರು ತಿನ್ನಬಾರದು ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಏಕೆಂದರೆ ಇದು ಗಂಟಲು ನೋವು ಶೀತ ಮತ್ತಿತರ ಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಮೊಸರು ನಿಜವಾಗಿ ಒಂದು ಸೂಪರ್ ಪೌಷ್ಟಿಕ ಆಹಾರ ಪದಾರ್ಥ. ಇದು ದೇಹಕ್ಕೆ ಉತ್ತಮವಾದ ಜೀವಕೋಶಗಳನ್ನು ಹರಡುತ್ತದೆ. ಮಾತ್ರವಲ್ಲ ಪೊಟ್ಯಾಶಿಯಂ ಕ್ಯಾಲ್ಸಿಯಂ ಮೆಗ್ನೇಶಿಯಂ ಮತ್ತು ಪ್ರೋಟೀನ್ ಗಳ ಭಂಡಾರವಾಗಿದೆ ಈ ಮೊಸರು.

ಈ ಬಗ್ಗೆ ಆಯುರ್ವೇದ ಅಲೋಪತಿ ಏನು ಹೇಳುತ್ತದೆ?

ಆಯುರ್ವೇದದ ಪ್ರಕಾರ ಮೊಸರು ಚಳಿಗಾಲದಲ್ಲಿ ಒಳ್ಳೆಯದಲ್ಲ. ಏಕೆಂದರೆ ಇದು ಗ್ರಂಥಿಗಳಲ್ಲಿ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಇದರಿಂದ ಗಂಟಲಿನಲ್ಲಿ ಲೋಳೆ ಹೆಚ್ಚಾಗುತ್ತದೆ. ಇದು ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಉಸಿರಾಟದ ಸಮಸ್ಯೆ ಇರುವವರು, ಅಸ್ತಮಾ ಶೀತ ಕೆಮ್ಮು ಇರುವವರಿಗೆ ಇದು ಇನ್ನಷ್ಟು ಹೆಚ್ಚಿನ ಸಮಸ್ಯೆಯನ್ನುಂಟು ಮಾಡಬಹುದು. ಆದ್ದರಿಂದ ಚಳಿಗಾಲದಲ್ಲಿ ವಿಶೇಷವಾಗಿ ರಾತ್ರಿಯಲ್ಲಿ ಮೊಸರು ಸೇವಿಸದಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಆಯುರ್ವೇದ ಅಭಿಪ್ರಾಯಪಡುತ್ತದೆ.

ಅಲೋಪತಿ ಏನು ಹೇಳುತ್ತದೆ?

ಮೊಸರು ಅತ್ಯುತ್ತಮ ರೋಗನಿರೋಧಕ ವರ್ಧಕ ಎಂದು ವಿವಿಧ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಇದರಲ್ಲಿ ವಿಟಮಿನ್ ಬಿ 12, ಕ್ಯಾಲ್ಸಿಯಂ ಮತ್ತು ರಂಜಕವೂ ಸಮೃದ್ಧವಾಗಿದೆ. ಮಾತ್ರವಲ್ಲ ಇದು ಶರಿರವನ್ನು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹಗಲಿನ ಸಮಯದಲ್ಲಿ ಮೊಸರು ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ವಿಜ್ಞಾನ ಹೇಳುತ್ತದೆ. ಸಂಜೆ ಐದು ಗಂಟೆಯ ನಂತರ ಮೊಸರು ತಿನ್ನಬಾರದು. ಇದರಿಂದ ಕಫ ಸೃಷ್ಟಿಯಾಗುತ್ತದೆ. ವಿಶೇಷವಾಗಿ ಅಸ್ತಮಾ ಮತ್ತು ಇತರ ಅಲರ್ಜಿ ಕಾಯಿಲೆ ಇರುವವರು ಇದನ್ನು ರಾತ್ರಿ ಹೊತ್ತು ತಿನ್ನಬಾರದು.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ವಾರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮೊಸರು ಸೇವಿಸುವ ಮಹಿಳೆಯರಿಗೆ ಅಧಿಕರಕ್ತದೊತ್ತಡ ಬರುವ ಸಾಧ್ಯತೆ ಕಡಿಮೆ. ಡೈರಿ ಉತ್ಪನ್ನಗಳ ಪೈಕಿ ಮೊಸರು ಅತಿಹೆಚ್ಚು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ತಾಜಾ ಮೊಸರು ತಿನ್ನಿರಿ ಯಾವುದೇ ಹಾನಿಯಿಲ್ಲ

ಫ್ರಿಡ್ಜ್ ನಲ್ಲಿಟ್ಟ ಮೊಸರನ್ನು ಸೇವಿಸಬಾರದು ಮೊಸರನ್ನು ಸೇವಿಸಬೇಡಿ. ಮೊಸರು ವಿವಿಧ ರೀತಿಯ ರೋಗಗಳ ಗುಣಔಷಧಿಯಾಗಿದೆ. ರಾತ್ರಿಯಲ್ಲಿ ಮೊಸರು ಸೇವಿಸಬಹುದು ಅಥವಾ ಕೆಮ್ಮಿನಿಂದ ಬಳಲುತ್ತಿರುವವರು ವ್ಯಕ್ತಿಗಳು ಮಾತ್ರ ರಾತ್ರಿ ಮೊಸರು ಸೇವಿಸಬಾರದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. ಭೋಜನದಲ್ಲಿ ಪುದೀನಾ ಜೀರಿಗೆ ಅದೇ ಸಮಯದಲ್ಲಿ ಅಜೀರ್ಣವನ್ನು ತಪ್ಪಿಸಲು ಮೆಂತ್ಯವನ್ನು ಮೊಸರಿನೊಂದಿಗೆ ಸೇರಿಸಿ ಸೇವಿಸಬಹುದು.

LEAVE A REPLY

Please enter your comment!
Please enter your name here