ಇದು ನಮ್ಮ ಊರು: ಅಪಘಾತದಲ್ಲಿ ಗಾಯಗೊಂಡ ತಮ್ಮ ಸ್ನೇಹಿತನಿಗೆ ಉಪಯೋಗವಾಗಲೆಂದು ಯುವ ಎಂಜಿನಿಯರ್‌ಗಳಾದ ಡಾನ್ ಪಾಲ್ ಮತ್ತು ಸಿ ಸೂರಜ್ ಎಂಬ ಇಬ್ಬರು ಸೇರಿ ರೋಗಿಗಳಿಗೆ ಯಾರದೇ ಆಸರೆ ಇಲ್ಲದೆ ಸ್ವಯಂ ಆಗಿ ನಿಲ್ಲಲು ಮತ್ತು ಮಲಗಲು ಉಪಯೋಗವಾಗುವಂತಹ ಗಾಳಿ ಕುರ್ಚಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವರು ತಮ್ಮ ಈ ಆವಿಷ್ಕಾರವನ್ನು 2016 ರಲ್ಲಿ ಬಿಟೆಕ್ ಉತ್ತೀರ್ಣರಾದ ಕೆ.ಎಸ್.ವಿಷ್ಣು ಎಂಬ ತಮ್ಮ ಸ್ನೇಹಿತನಿಗೆ ಸಮರ್ಪಿಸಿದ್ದಾರೆ. ವಿಷ್ಣು , ಡಾನ್ ಪಾಲ್ ಮತ್ತು ಸಿ ಸೂರಜ್ ಇವರೆಲ್ಲರೂ ಒಟ್ಟಿಗೆ ಒಂದೇ ಬ್ಯಾಚಿನಲ್ಲಿ ತ್ರಿಶೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತವರಾಗಿದ್ದಾರೆ. ಅಪಘಾತದ ನಂತರ ವಿಷ್ಣು ಹಾಸಿಗೆಯಿಂದ ಎದ್ದೇಳಲಾಗದಂತಹ ಪರಿಸ್ಥಿತಿಯಲ್ಲಿರುವುದರಿಂದ ಸ್ನೇಹಿತರು ತಮ್ಮ ಸ್ನೇಹಿತನಿಗಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಪ್ರಾಣ ಸ್ನೇಹಿತರಾದ ವಿಷ್ಣು, ಡಾನ್ ಮತ್ತು ಸೂರಜ್ ಅವರು ಕಾಲೇಜಿನಿಂದ ಶಿಕ್ಷಣ ಮುಗಿಸಿ ಹೊರ ಬರುವಾಗ ಜೀವನದ ವೈಫಲ್ಯ ಮತ್ತು ಯಶಸ್ಸಿನಲ್ಲಿ ಒಟ್ಟಿಗೆ ಇರುವುದಾಗಿ ಪ್ರತಿಜ್ಞೆ ಮಾಡಿದ್ದರು. ಪ್ರತಿಜ್ಞೆಯನ್ನು ಉಳಿಸಿಕೊಂಡಿರುವ ಸ್ನೇಹಿತರು ಡಾನ್ ಮತ್ತು ಸೂರಜ್ ತಮ್ಮ ಆವಿಷ್ಕಾರ ಮತ್ತು ವ್ಯವಹಾರದಲ್ಲಿ ವಿಷ್ಣುವನ್ನು ಪಾಲುದಾರರನ್ನಾಗಿ ಸೇರಿಸಿಕೊಂಡು ಇದೀಗ ತಮ್ಮ ಯಶಸ್ವಿ ಗಾಲಿಕುರ್ಚಿಯನ್ನು ತಯಾರಿಸಿ ಮಾರಾಟ ಮಾಡುವ ಹೊಸ ಉದ್ಯಮ ಪ್ರಾರಂಭಿಸಿದ್ದಾರೆ.

LEAVE A REPLY

Please enter your comment!
Please enter your name here