ಹರ್ಯಾಣ: ಹರ್ಯಾಣದ ಅಂಗವಿಕಲ ಬಾಡಿಬಿಲ್ಡರ್ ಸ್ಟೋರಿ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಸೋನೆಪತ್‌ನ ಈ ಅಂಗವಿಕಲ ಬಾಡಿಬಿಲ್ಡರ್ ಮೋಹಿತ್ ಅವರ ಜೀವನ ಹೋರಾಟಗಳಿಂದ ತುಂಬಿವೆ. ಮೋಹಿತ್ ಈ ಸಮಯದಲ್ಲಿ ಬಾಡಿಬಿಲ್ಡರ್ ಆಗಿದ್ದು, ಅವರು ಕ್ಯಾನ್ಸರ್ ರೋಗವನ್ನು ಸೋಲಿಸಿದ್ದಾರೆ. ಕಾಲು ಇಲ್ಲ, ಆದರೆ ಉತ್ಸಾಹ ಮತ್ತು ಶಕ್ತಿ ಹುಮ್ಮಸ್ಸು ಕುಂದಿಲ್ಲ. ಮೂಳೆ ಕ್ಯಾನ್ಸರ್ ನಿಂದ ಒಂದು ಕಾಲು ಕಳೆದುಕೊಂಡಿದ್ದ 24 ವರ್ಷದ ಮೋಹಿತ್, ಮೊದಲು ಕ್ಯಾನ್ಸರ್ ಅನ್ನು ಸೋಲಿಸಿದ್ದು, ಅದರ ನಂತರ ಅವರು ಹಿಂತಿರುಗಿ ನೋಡಲಿಲ್ಲ. ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ.

Cancer, Accident, One-leg amputation: Bodybuilding Athlete Mohit Kumar Is  Invincible! - bodyandstrength.com

ಮೋಹಿತ್ ಅವರಿಗೆ 2010 ರಲ್ಲಿ ಮೂಳೆ ಕ್ಯಾನ್ಸರ್ ಬಂತು. ಬಳಿಕ ಅವರು ದೆಹಲಿಯ ಆಸ್ಪತ್ರೆಗಳು ಆತನ ಕಾಲಿಗೆ ರಾಡ್ ಹಾಕಲಾಯಿತು. ಆ ಸಮಯದಲ್ಲಿ ಅವರು ಗುಣಮುಖರಾದರು. ಆದರೆ 5 ವರ್ಷಗಳ ನಂತರ,ಮತ್ತೆ ಅದೇ ಕಾಲಿನಲ್ಲಿ ಕ್ಯಾನ್ಸರ್ ಹೆಚ್ಚಾಯಿತು. ಇದರಿಂದಾಗಿ ಪಾದದ ಮೂಳೆ ಸಂಪೂರ್ಣವಾಗಿ ಕರಗಿತು. ಇದರ ನಂತರ ವೈದ್ಯರು ಅವರ ಕಾಲು ಕತ್ತರಿಸಿದರು.

ಬಳಿಕ ಮೋಹಿತ್ ಅವರ ಕ್ಯಾನ್ಸರ್ ಗುಣವಾಯಿತು. ಆದರೆ ಒಂದು ಪಾದದಿಂದ ಬದುಕುವುದು ಸುಲಭವಲ್ಲ. ಒತ್ತಡವನ್ನು ತೊಡೆದು ಹಾಕಲು ಅವರು ಯೂಟ್ಯೂಬ್‌ನಲ್ಲಿ ಬಾಡಿಬಿಲ್ಡರ್‌ಗಳ ವೀಡಿಯೊಗಳನ್ನು ನೋಡಲಾರಂಭಿಸಿದರು. ಇದರ ನಂತರ ಅವರು ಬಾಡಿಬಿಲ್ಡರ್ ಆಗಲು ತೀರ್ಮಾನಿಸಿದರು.

twitter
twitter

2016 ರಲ್ಲಿ ಅವರು ಜಿಮ್‌ಗೆ ಹೋಗಲು ಪ್ರಾರಂಭಿಸಿದರು. ಆರಂಭದಲ್ಲಿ, ಅವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನೇಕ ಬಾರಿ ಜಿಮ್‌ನಿಂದಾಗಿ ಕಾಲಿಗೆ ಗಾಯವಾಯಿತು. ಆದರೆ ಅವರು ಹಠ ಬಿಡಲಿಲ್ಲ. ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 6 ಗಂಟೆಗಳ ಕಾಲ ಜಿಮ್ ಮಾಡುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಅವರು ಮಸಾಲೆರಹಿತ ಬೇಯಿಸಿದ ಆಹಾರವನ್ನು ಮಾತ್ರ ತಿನ್ನುತ್ತಿದ್ದಾರೆ. ಬೇಯಿಸಿದ ಕೋಳಿ, ಹಣ್ಣುಗಳು, ತರಕಾರಿಗಳು ಮತ್ತು ಬಾದಾಮ್ ತಿನ್ನುತ್ತಿದ್ದಾರೆ. ಅವರು ಸ್ಟಾರ್ ವಿಭಾಗದಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಅವರು ಮಿಸ್ಟರ್ ವರ್ಲ್ಡ್, ಮಿಸ್ಟರ್ ಯುಪಿ, ಶ್ರೀ ಹರಿಯಾಣ ಮತ್ತು ದೆಹಲಿ ಆಗಿದ್ದರು.

Mohit Kumar - Pure Inspiration for India - Disabled Bodybuilder - YouTube

 

Leave a Reply