‘ಗೇಮ್ ಆಫ್ ಅಯೋಧ್ಯಾ’ದ ಸಿನೆಮಾದ ವಿಶೇಷ ಸ್ಕ್ರೀನಿಂಗ್ ಶನಿವಾರ ನವ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ ಎಂದು ಅದರ ನಿರ್ದೇಶಕ ಸುನೀಲ್ ಸಿಂಗ್ ತಿಳಿಸಿದ್ದಾರೆ. ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದವನ್ನು ಅದರ ಹಿನ್ನೆಲೆಯಾಗಿರುವ ಸಿನೆಮಾವನ್ನು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ಮಾಡಲು ಅವರನ್ನು ಕೇಳಲಾಗಿದೆ ಎಂದು ಸುನೀಲ್ ಸಿಂಗ್ ಹೇಳಿದ್ದಾರೆ.
ಈ ಚಿತ್ರವನ್ನು ಡಿಸೆಂಬರ್ 30 ರಂದು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶಿಸಲಾಗುವುದು. ಡಿಸೆಂಬರ್ 31 ರಂದು ಚಲನಚಿತ್ರ ವಿಭಾಗದ ಆಡಿಟೋರಿಯಂನಲ್ಲಿ ಪ್ರದರ್ಶಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.
ಚಲನಚಿತ್ರವು ಲಿಬರ್ಹಾನ್ ಆಯೋಗದ ವರದಿಯನ್ನು ಆಧರಿಸಿದ್ದು, ಡಿಸೆಂಬರ್ 15 ರಂದು ಬಿಡುಗಡೆಯಾಗಿದೆ. ಆದರೆ ಹಲವಾರು ಸಂಘಟನೆಗಳ ಪ್ರತಿಭಟನೆಗಳ ಕಾರಣದಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ತಡೆಯಲಾಗಿದೆ.
1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ನಂತರದ ಪರಿಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಸಿನೆಮಾದಲ್ಲಿ ಬಿಂಬಿಸಲಾಗಿದ್ದು
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಮಾಜಿ ಗೃಹ ಸಚಿವ ಎಲ್.ಕೆ.ಆಡ್ವಾಣಿ ಅವರ ವಿಡಿಯೋ ಕೂಡ ಬಳಸಲಾಗಿದೆ ಎಂದು ಹೇಳಲಾಗಿದೆ.