ಮುಂಬೈ: ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ನಡೆದ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನದಿಯಲ್ಲಿ ಮುಳುಗಿ ಹನ್ನೊಂದು ಮಂದಿ ನೀರುಪಾಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಆನಂದ ಚತರ್ದಶಿ ಎಂದು ಗಣೇಶ ಚತುರ್ಥಿಯ ಹತ್ತನೇಯ ದಿನವನ್ನು ಕರೆಯಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ನಿರ್ಮಿಸಿದ ನೂರಾರು ಮಹಾ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜಿಸಿ ಬಿಡುತ್ತಾರೆ. ಹತ್ತು ದಿವಸಗಳ ಕಾಲ ಪೂಜಿಸಿ ಪುಷ್ಪ ಫಲಗಳನ್ನು ಅರ್ಪಿಸಿ ಹನ್ನೊಂದನೇಯ ದಿವಸ ಗಣಪತಿ ಬೊಪ್ಪಾ ಮೋರಿಯಾ ಘೋಷಣೆಯೊಂದಿಗೆ ವಿಸರ್ಜಿಸಲಾಗುತ್ತದೆ.

ಈ ಸಂದರ್ಭದಲ್ಲಿ ಒಟ್ಟು 33’700 ಸಣ್ಣ ವಿಗ್ರಹಗಳನ್ನು 843 ದೊಡ್ಟಡ ವಿಗ್ರಹಗಳನ್ನು ಸಮುದ್ರದಲ್ಲಿ ಬಿಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಸುಮಾರು ಎಂಟು ಲಕ್ಷ ಸಣ್ಣ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಆದರೆ ಕಳೆದ ಇಪ್ಪತ್ತನಾಲ್ಕು ಘಂಟೆಯ ಅವಧಿಯಲ್ಲಿ ವಿಗ್ರಹಗಳನ್ನು ವಿಸರ್ಜಿಸುವಾಗ ಹದಿನೆಂಟು ಮಂದಿ ನೀರುಪಾಲಾಗಿದ್ದಾರೆ.

Leave a Reply