ಕೋಝಿಕ್ಕೋಡ್ : ಕೇರಳ ಸರಕಾರ ಕೆಲವರನ್ನು ಸತ್ತವರ ಪಟ್ಟಿಗೆ ಸೇರಿಸಿದ ಎಡವಟ್ಟು ಕೋಝಿಕ್ಕೋಡ್‍ನಲ್ಲಿ ನಡೆದಿದೆ. ಕೇರಳ ಸರಕಾರದ ಪೆನ್ಶನ್ ಪಡೆಯುತ್ತಿದ್ದ ಇವರನ್ನೆಲ್ಲ ಅಧಿಕಾರಿಗಳು ಸತ್ತವರ ಪಟ್ಟಿಗೆ ಸೇರಿಸಿ ಕ್ಷೇಮ ಪೆನ್ಶನ್‍ನನ್ನು ತಡೆ ಹಿಡಿದಿದ್ದರು. ಸರಕಾರಿ ದಾಖಲೆಗಳಲ್ಲಿ ಸತ್ತವರ ಅಪೂರ್ವ ಸಂಗಮವನ್ನು ಕಲ್ಲಿಕೋಟೆ ಕಿಯಕ್ಕೋತ್ ಪಂಚಾಯತ್‍ನಲ್ಲಿ ನಡೆದಿದೆ. ಇಲ್ಲಿ ನೆರೆದವರೆಲ್ಲ ತಮ್ಮ ಜೀವಂತವಾಗಿ ಸತ್ತವರ ಲೆಕ್ಕಕ್ಕೆ ಸೇರಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೌಲಭ್ಯಗಳನ್ನು ತಡೆಹಿಡಿಯಲು ಎಂತೆಂಹ ಮೋಸಗಳು ನಡೆಯುತ್ತಿವೆ ಎಂಬುದನ್ನು ಇಲ್ಲಿ ನೆರೆದವರ ಮುಖಗಳು ಸಾರಿ ಹೇಳುತ್ತಿದ್ದವು. ಸರಕಾರದ ಅಧಿಕಾರಿಗಳಿಂದ ಸಂಭವಿಸಿದ ತಪ್ಪನ್ನು ಕೂಡಲೇ ಸರಿಪಡಿಸದಿದದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕಾರ್ಯಕ್ರಮ ಹಮ್ಮಿಕೊಂಡವರು ಆಕ್ರೋಶಿಸಿದ್ದಾರೆ.

ಸರಕಾರ ಇವರೆಲ್ಲ ಸತ್ತಿದ್ದಾರೆಎಂದು ಹೇಳುತ್ತಿದೆ. ಆದರೆ ನಾವು ಸತ್ತಿಲ್ಲ ಬದುಕಿದ್ದೇವೆ ನೋಡಿ ಎಂದು ಹೇಳುತ್ತಾ ಸರಕಾರಿ ಕಚೇರಿಗಳಿಗೆ ವಿಕಲಚೇತನರು, ವಯೋವೃದ್ಧರು ಅಲೆದಾಡುತ್ತಿದ್ದಾರೆ. ಆದರು ತಾವು ಜೀವಂತ ಇದ್ದೇವೆ ಎಂದು ಸಾಬೀತುಪಡಿಸಲು ಇವರಿಂದ ಸಾಧ್ಯವಾಗಿಲ್ಲ. ದಾಖಲೆಗಳಲ್ಲಿ ಏನಿದೆಯೋ ಅದನ್ನೆ ಅಧಿಕಾರಗಳು ಹೇಳುತ್ತಿದ್ದಾರೆ. ಕೆಲವರ ಪೆನ್ಶನನ್ನು ಸತ್ತಿದ್ದಾರೆ ಎಂದು ತಡೆಹಿಡಿಯಲಾಗಿದ್ದರೆ ಇನ್ನು ಕೆಲವರ ಪೆನ್ಶನನ್ನು ಇವರು ಸ್ಥಿತಿವಂತರು ಎಂದು ಕಾರಣವೊಡ್ಡಿ ತಡೆಹಿಡಿಯಲಾಗಿದೆ. ಇಲ್ಲಿ ನೆರದವರಲ್ಲಿ ಮೂರು ವರ್ಷಗಳಿಂದ ಸತ್ತವರು (ಸರಕಾರಿ ದಾಖಲೆಗಳಲ್ಲಿ) ಸೇರಿದ್ದಾರೆನ್ನುವುದು ಇನ್ನೊಂದು ವಿಸ್ಮಯವಾಗಿದ್ದು, ಇಂತಹ ಬೇಜವಾಬ್ದಾರಿಗೆ ಎಲ್ಲೆಡೆ ತೀವ್ರ ನಿರಾಶೆ ವ್ಯಕ್ತವಾಗಿದೆ.

ಕೆಯಕ್ಕೋತ್ತ್‍ಪಂಚಾಯತ್ ಸರಕಾರದಿಂದ ವಂಚನೆಗೆ ತುತ್ತಾದವರನ್ನೆಲ್ಲ ಸೇರಿಸಿ ಸಭೆ ನಡೆಸಿದ್ದು, ಅವರ ಬವಣೆಗಳನ್ನುಆಲಿಸಿತು. ದಾಖಲೆಗಳನ್ನು ಸರಿಪಡಿಸಿ ಸರಕಾರದಿಂದ ಸಿಗುತ್ತಿದ್ದ ಸೌಲಭ್ಯಗಳನ್ನು ಶೀಘ್ರವೇ ಪುನರಾರಂಭಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸರಕಾರಿ ದಾಖಲೆಗಳಲ್ಲಿ ಸತ್ತವರ ಸಂಗಮ ಆಯೋಜಿಸಿದವರು ತಿಳಿಸಿದರು.

photo video – media one channel

Leave a Reply