ಹೊಸದಿಲ್ಲಿ; ಇಲ್ಲಿ ನಡೆದ ಹಿಜ್ರಾ ಹಬ್ಬದ ಉದ್ಘಾಟನೆಯಲ್ಲಿ ಭಾಗವಹಿಸಿದ ಭಾರತೀಯ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ರವರ ಫೋಟೋ ವೈರಲ್ ಆಗಿದೆ.

ಭಾರತ ಕ್ರಿಕೆಟ್ ತಂಡದ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ಅವರು ಸೀರೆ ಉಟ್ಟು ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಂಗಳಮುಖಿಯರ ಸಮಾನತೆಯ ಪರ ನಿಂತಿದ್ದಾರೆ.

ದೆಹಲಿಯಲ್ಲಿ ನಡೆದ ಹಿಜ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಭೀರ್ ಅವರು, ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸುವ ಮೂಲಕ ಗಮನ ಸೆಳೆದರು. ಗಂಭೀರ್, ಮಂಗಳಮುಖಿಯರ ಸಮಾನತೆಯ ಪರವಾಗಿ ಧ್ವನಿ ಎತ್ತುವ ನಿಟ್ಟಿನಲ್ಲಿ ಈ ರೀತಿ ವೇಷ ತೊಟ್ಟಿದ್ದರು.

ಮಂಗಳ ಮುಖಿಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಬೇಕು ಎಂಬ ಉದ್ದೇಶದಿಂದ ಮಂಗಳ ಮುಖಿಯರನ್ನು ಎಲ್ಲರಂತೆ ಗೌರವಿಸಬೇಕು ಎಂದು ಗಂಭೀರ್ ಹೇಳಿದ್ದಾರೆ.

ದೆಹಲಿಯಲ್ಲಿ ಹಿಜ್ರಾಗಳ ಹಬ್ಬದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಗೌತಮ್ ಗಂಭೀರ್ ಎಲ್ಲರ ಗಮನ ಸೆಳೆದ್ರು. ಈ ಬಾರಿ ಹಿಜ್ರಾ ಹಬ್ಬವನ್ನು ಎಚ್.ಐ.ವಿ ಹಾಗೂ ಏಡ್ಸ್ ಅಲೈನ್ಸ್ ಇಂಡಿಯಾ ವತಿಯಿಂದ ಆಚರಿಸಲಾಯಿತು. ಗೌತಮ್ ಅವರ ಈ ನಡೆಗೆ ಸಾಮಾಜಿಕ ತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.

Leave a Reply