ಇದು ನಮ್ಮ ಊರು: ಇಬ್ಬರು ಯುವಕರು ಗಂಡ- ಹೆಂಡತಿಯಂತೆ ಬದುಕುವ ಸಲುವಾಗಿ ವಿವಾಹವಾಗಿದ್ದು ಮತ್ತು ಈ ರಹಸ್ಯವನ್ನು ಮುಚ್ಚಿಡಲು ಮಗುವನ್ನುದತ್ತು ಪಡೆದಂತಹ ಆಘಾತಕಾರಿ ಸುದ್ದಿ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಿಂದ ವರದಿಯಾಗಿದೆ. ಇಬ್ಬರ ಶವಗಳ ಪೋಸ್ಟ್ ಮಾಟಂ ವರದಿಯಲ್ಲಿ ಈ ರಹಸ್ಯ ಇದೀಗ ಬಹಿರಂಗವಾಗಿದೆ. ಇಬ್ಬರ ನಡುವೆ ಕೆಲವು ವಿವಾದಗಳಿದ್ದವು ಈ ಕಾರಣದಿಂದಾಗಿ ಹೆಂಡತಿಯಾಗಿದ್ದ ಯುವಕ ಆತ್ಮಹತ್ಯೆಗೆ ಯತ್ನಿಸಿ ದೇಹಕ್ಕೆ ಬೆಂಕಿ ಹಚ್ಚಿದ್ದ, ಅವನನ್ನು ರಕ್ಷಿಸಲು ಹೋದ ಗಂಡನಾದ ಯುವಕ ಕೂಡ ಬೆಂಕಿಯಲ್ಲಿ ಬೆಂದು ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆನಂತರ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದರು.

ಸಾವಿನ ನಂತರ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪರೀಕ್ಷೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯು ಈ ಯುವಕರ ಜೀವನದ ಆಘಾತಕಾರಿ ರಹಸ್ಯವನ್ನು ತೆರೆದಿಟ್ಟಿದೆ. ಪೊಲೀಸರಿಗೆ ದೊರೆತ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯ ಪಿಎಂ ವರದಿಯಲ್ಲಿ ಅವಳು ಮಹಿಳೆ ಅಲ್ಲ ಪುರುಷ ಎಂದು ತಿಳಿದುಬಂದಿದೆ. 8 ವರ್ಷಗಳಿಂದ ಇಬ್ಬರು ಯುವಕರು ಗಂಡ ಮತ್ತು ಹೆಂಡತಿಯಾಗಿ ಬದುಕುತ್ತಿದ್ದರು ಎಂಬುದು ಈಗ ಬಹಿರಂಗವಾಗಿದೆ.

ಶುಜಲ್ಪುರದ ಯುವಕ ವಿಕ್ರಮ್ ಸಿಂಗ್ ಮೇವಾಡಾ ಎಂಬಾತ ಕಲಾಪಿಪಾಲ್ ಭೇಶವಾದಲ್ಲಿ ವಾಸಿಸುವ ಹುಡುಗನನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. 2012 ರಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಪುರುಷನಾಗಿದ್ದ ಯುವಕ ವಿಕ್ರಂ ಸಿಂಗ್ ನ ಕುಟುಂಬ ದೊಂದಿಗೆ ಆತ ಹುಡುಗಿಯನ್ನು ಮದುವೆಯಾಗುತ್ತಿರುವುದಾಗಿ ಹೇಳಿ ಒಪ್ಪಿಗೆ ಪಡೆಯಲಾಯಿತು. ಯುವತಿಯಾಗಿದ್ದ ಯುವಕನಿಗೆ ಕುಟುಂಬವಿರಲಿಲ್ಲ. ಪ್ರೇಮ ವಿವಾಹದ ನಂತರ ಇಬ್ಬರೂ ಸೆಹೋರ್ನಲ್ಲಿ ವಾಸಿಸಲು ಪ್ರಾರಂಭಿಸಿದರು. ಹೆಂಡತಿಯಾಗಿ ಬದುಕಿದ್ದ ಹುಡುಗನಿಗೆ ದೇವ್ಕುನ್ವಾರ್ ಎಂದು ಹೆಸರಿಡಲಾಯಿತು. ಎರಡು ವರ್ಷಗಳ ನಂತರ ಕುಟುಂಬವು ಮಗುವಿಗಾಗಿ ಒತ್ತಾಯಿಸಿದಾಗ ಮಗುವನ್ನು ದತ್ತು ಪಡೆಡಿದ್ದರು ಎನ್ನಲಾಗಿದೆ. ಇವರಿಬ್ಬರ ನಡುವೆ ಸಲಿಂಗ ಸಂಬಂಧ ಇತ್ತು ಎನ್ನಲಾಗಿದೆ. ಸಮಾಜದಿಂದ ಅದನ್ನು ಮರೆ ಮಾಚಲು ಈ ರೀತಿ ಪತಿ ಪತ್ನಿಯಾಗಿ ಜೀವಿಸಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here