ಗಾಝಿಯಾಬಾದ್: ಮುರಾದ್ ನಗರದ ಮಸೀದಿಯೊಂದರ ಮೇಲ್ಛಾವಣಿಯಲ್ಲಿ ಎಳರ ಹರೆಯದ ಹುಡುಗಿಯ ಮೃತ ದೇಹ ಪತ್ತೆಯಾಗಿದೆ. ಗೋಣಿ ಚೀಲದಲ್ಲಿ ತುಂಬಿಸಿಡಲಾಗಿತ್ತು. ಶನಿವಾರ ಮದ್ಯಾಹ್ನದಿಂದ ಈ ಬಾಲಕಿ ನಾಪತ್ತೆಯಾಗಿದ್ದಳು. ಸಂಜೆ ಆರೂ ಮೂವತ್ತಕ್ಕೆ ನಮಾಝ್ ನಿರ್ವಹಿಸಲು ಬಂದಿದ್ದ ಸುಲೈಮಾನ್ ಎಂಬವರಿಗೆ ಮೃತದೇಹವಿದ್ದ ಗೋಣಿ ಚೀಲ ಕಂಡು ಸ್ಥಳೀಯರಿಗೆ ವಿಷಯ ತಿಳಿಸಿದರು. ಬಾಲಕಿಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆಯೆಂದು ಹೇಳಲಾಗುತ್ತದೆ.

ಆದರೆ ಈ ಕೊಲೆ ರಾಜಕೀಯ ವೈಷಮ್ಯದಿಂದ ನಡೆದಿದೆಯೆಂದು ಬಾಲಕಿಯ ತಂದೆ ಆರೋಪಿಸಿದ್ದು, ಮುರಾದ್ ನ ಪ್ರಾದೇಶಿಕ ಕೌನ್ಸಿಲರ್ ಅಝಾದ್ ಬೇಗ್ ವಿರುದ್ದ ದೂರು ದಾಖಲಿಸಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಆರೋಪಿಯ ವಿರುದ್ಧ ಬಾಲಕಿಯ ಮಾವ ಸ್ಪರ್ಧಿಸುತ್ತಿದ್ದಾರೆ. ಇದೇ ಕಾರಣಕ್ಕ ಮಗಳನ್ನು ಕೊಲ್ಲಲಾಗಿದೆಯೆಂಬುದು ಅವರ ಆರೋಪವಾಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Leave a Reply