ಮುಂಬೈ: ದೇಶದ ಅತಿದೊಡ್ಡ ಖಾಸಗಿ ಟೆಲಿಕಾಂ ಸೇವಾ ಕಂಪೆನಿ ಜಿಯೋ ಇದೇ ಮೊದಲ ಬಾರಿಗೆ ತನ್ನಿಂದ ಬೇರೆ ನೆಟ್ವರ್ಕ್ ಮೊಬೈಲ್‌ಗೆ ಹೊರಹೋಗುವ ಧ್ವನಿ ಕರೆ (ವಾಯ್ಸ್ ಕಾಲ್)ಗಳ ಮೇಲೆ ಪ್ರತಿನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದೆ. ಗುರುವಾರದಿಂದಲೇ ಇದು ಜಾರಿಯಾಗಲಿದೆ. ಈವರೆಗೂ ಜಿಯೋ ಇದನ್ನು ಉಚಿತ ಸೇವೆಯಾಗಿ ನೀಡುತ್ತಿತ್ತು. ಇದೀಗ ಶುಲ್ಕ ವಿಧಿಸುತ್ತಿದೆ. ಆದರೆ ಇದಕ್ಕೆ ಬದಲಾಗಿ ಹೆಚ್ಚುವರಿ ಡೇಟಾಪ್ಯಾಕ್ ಅನ್ನು ಗ್ರಾಹಕರಿಗೆ ಒದಗಿಸುವುದಾಗಿ ಹೇಳಿದೆ.

ವಿಶೇಷವೆಂದರೆ ಜಿಯೋದಿಂದ ಜಿಯೋಗೆ ಮಾಡುವ ಧ್ವನಿಕರೆಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ ಟಾಪ್ ಅಪ್ ವೋಚರ್ ಸೌಲಭ್ಯ ಪರಿಚಯಿಸುತ್ತಿದ್ದು 10 ರೂಗೆ 124 ನಿಮಿಷ, 20 ರೂಗೆ 249 ನಿಮಿಷ ಕಾಲ ಧ್ವನಿಕರೆಗೆ ಅವಕಾಶ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here