ಹೊಸದಿಲ್ಲಿ: ಕೆಲಸ ಮಾಡಿ ಸಂಬಳ ಕೇಳಿದ್ದಕ್ಕೆ ಬಾಲಕಿಯನ್ನು ಕೊಂದ ಘಟನೆಯಲ್ಲಿ ತಲೆತಪ್ಪಿಸಿಕೊಂಡಿದ್ದ ªಗೌರಿ(38) ಎಂಬ ಮಹಿಳೆಯನ್ನು ಪೊಲೀಸರು ಹರಿಯಾಣದಲ್ಲಿ ಬಂಧಿಸಿದ್ದಾರೆ.ದಿಲ್ಲಿಯ ಕೊಳಚೆ ನೀರು ಹರಿವ ಕಾಲುವೆಯಲ್ಲಿ ಬಾಲಕಿಯ ದೇಹದಿಂದ ಬೇರ್ಪಡಿಸಲಾದ ತಲೆ ಪತ್ತೆಯಾಗಿತ್ತು. ನಂತರ ಪೊಲೀಸರು ವ್ಯಾಪಕ ತನಿಖೆ ನಡೆಸಿದಾಗ ಬ್ಯಾಗ್ ವೊಂದರಲ್ಲಿ ಬಾಲಕಿಯ ದೇಹದ ಇತರಭಾಗಗಳು ಪತ್ತೆಯಾಗಿದ್ದವು.

ಕೇಸಿಗೆ ಸಂಬಂಧಿಸಿ ಮಂಜಿತ್ ಎಂಬ ಆರೋಪಿಯನ್ನು ಪೊಲೀಸರು ಮೊದಲೇ ಬಂಧಿಸಿದ್ದರು. ಸಹ ಆರೋಪಿಗಳಾದ ಶಾಲು, ರಾಕೇಶ್, ಗೌರಿ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ.

ಇವರ ತಲೆಗೆ ಪೊಲೀಸರು 50,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಇದೇ ವೇಳೆ ತಪ್ಪಿಸಿಕೊಂಡ ಆರೋಪಿಗಳಲ್ಲಿ ಒಬ್ಬಳಾದ ಗೌರಿ ತಪ್ಪು ಮಾಹಿತಿ ನೀಡಿ ಹರಿಯಾಣದ ಜಂಗ್ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಮದುವೆಯಾಗಿದ್ದಾಳೆ ಎಂದು ಪೊಲೀಸರಿಗೆ ಅಕ್ಟೋಬರ್ ಹದಿನೆಂಟರಂದು ಮಾಹಿತಿ ಸಿಕ್ಕಿತ್ತು. ನಂತರ ದಿಲ್ಲಿ ಪೊಲೀಸರು ಹರ್ಯಾಣಕ್ಕೆ ತೆರಳಿ ತನಿಖೆ ನಡೆಸಿದಾಗ ಯುವತಿ ಸಿಕ್ಕಿಬಿದ್ದಿದ್ದಾಳೆ.

ಪ್ಲೇಸ್‍ಮೆಂಟ್ ಏಜೆನ್ಸಿ ಹೊಂದಿರುವ ಗೌರಿ ಸಹಾಯಕ್ಕೆ ಆ ಝಾರ್ಕಂಡಿನ ಬಾಲಕಿಯನ್ನು ಕರೆದುಕೊಂಡು ಬಂದಿದ್ದಳು. ಆದರೆ ಒಂದು ವರ್ಷ ಬಾಲಕಿಗೆ ಸಂಬಳ ನೀಡಿರಲಿಲ್ಲ. ಇದನ್ನು ಕೇಳಿದಾಗ ತನ್ನ ಸಂಗಡಿಗರೊಂದಿಗೆ ಸೇರಿ ಮಹಿಳೆ ಬಾಲಕಿಯ ಕೊರಳು ಕತ್ತರಿಸಿ ಕೊಂದು ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply