ಛಲ ಮತ್ತು ಪರಿಶ್ರಮ ಎರಡೂ ಸೇರಿದರೆ ಯಾರಿಂದಲೂ ಯಾರನ್ನೂ ಸೋಲಿಸಲು ಸಾಧ್ಯವಿಲ್ಲ. 18 ವರ್ಷ ವಯಸ್ಸಿನ ರೇಖಾ ಇದಕ್ಕೆ ಸ್ಪಷ್ಟ ಉದಾಹರಣೆ. ಬಾಲ್ಯ ವಿವಾಹ ಮಾಡುತ್ತಾರೆಂದು ಮನಗಂಡ ಆ ಪುಟ್ಟ ಹುಡುಗಿ ವಿವಾಹದಿಂದ ತಪ್ಪಿಸಿಕೊಳ್ಳಲು ಚಿಕ್ಕ ಬಳ್ಳಾಪುರ ಗ್ರಾಮದ ತನ್ನ ಮನೆಯಿಂದ ಓಡಿಹೋಗುತ್ತಾಳೆ. ಬೆಂಗಳೂರಿನಲ್ಲಿದ್ದ ಮಿತ್ರರ ಬಳಿಗೆ ಹೋಗಿ, ಅಲ್ಲಿ ಸಮಯವನ್ನು ವ್ಯರ್ಥ ಮಾಡದೆ ಹೆಬ್ಬಾಳದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರವೊಂದನ್ನು ಸೇರಿಕೊಂಡಳು. ಕಂಪ್ಯೂಟರ್ ಕೋರ್ಸ್ನ ಜೊತೆಗೆ ತಾನು ಶಿಕ್ಷಣವನ್ನು ಮುಂದುವರೆಸಬೇಕು ಎಂದು ಬಯಸಿದಳು. ಅದಕ್ಕಾಗಿ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಸಹಾಯ ಕೋರಿದಳು.

ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಸದಸ್ಯರು ರೇಖಾಳನ್ನು ಭೇಟಿಯಾಗಿ ಸ್ಪರ್ಷ ಟ್ರಸ್ಟ್ಗೆ ಆಕೆಯನ್ನು ವಹಿಸಿಕೊಟ್ಟರು. ಅವರು ಆಕೆಯನ್ನು ನೆಲಮಂಗಲದ ಗೊಲ್ಲಹಳ್ಳಿ, ಸರ್ಕಾರಿ ಕಾಲೇಜಿಗೆ ಸೇರಲು ಸಹಕರಿಸಿದರು. ಎರಡು ವರ್ಷಗಳ ಕಠಿಣ ಓದಿನ ಬಳಿಕ ಏಪ್ರಿಲ್ 18 ರಂದು ರೇಖಾ 90% ಅಂಕ ಗಳಿಸಿದಳು. ಬಿ.ಎ.ಪದವಿ ಪಡೆದು ಮುಂದೆ ಐಎಎಸ್ ಮಾಡುವ ಕನಸನ್ನು ಹೊಂದಿದ್ದಾಳೆ. .

Leave a Reply