ಸಂಘ ರೆಡ್ಡಿ : ಪ್ರೀತಿಸಲು ನಿರಾಕರಿಸಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಇರಿದು ಹತ್ಯೆ ಮಾಡಿದ ಘಟನೆ ತೆಲಂಗಾಣದ ಸಂಘ ರೆಡ್ಡಿ ಜಿಲ್ಲೆಯಲ್ಲಿ ಜರಗಿದೆ. ಹತ್ತನೇಯ ತರಗತಿಯಲ್ಲಿ ಕಲಿಯುತ್ತಿದ್ದ ನಿಕಿತ ಎಂಬಾಕೆಯನ್ನು ಇಂಜಿನಿಯರಿಂಗ್ ವಿದ್ಯಾರ್ಥಿನಿ ಅರವಿಂದ ಎಂಬಾತ ಹತ್ಯೆ ಮಾಡಿದ್ದ. ಈತನನ್ನು ನಾಗರಿಕರು ಸೆರೆಹಿಡಿದು ಪೋಲೀಸರಿಗೆ ಒಪ್ಪಿಸಿದರು.

ಮಹಾರಾಷ್ಟ್ರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೂರನೇಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರವಿಂದ್ ಹುಡುಗಿಯ ಮನೆಗೆ ತೆರಳಿ ಪ್ರೇಮ ಯಾಚನೆ ಮಾಡಿದ್ದ. ಅವಳು ನಿರಾಕರಿಸಿದ ಕೂಡಲೇ ಮೊದಲೇ ತಂದಿಟ್ಟಿದ್ದ ಚೂರಿಯಿಂದ ಕತ್ತನ್ನು ಇರಿದಿದ್ದ. ಆಕೆಯನ್ನು ನೆರೆ ಮನೆವಾಸಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಫಲ ನೀಡಲಿಲ್ಲ. ಕೂಡಲೇ ಊರ ನಾಗರಿಕರು ಆತನನ್ನು ಸೆರೆಹಿಡಿದು ಥಳಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ.

Leave a Reply