ಫೆಬ್ರವ 14 ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು ತಮ್ಮ ತಮ್ಮ ಪ್ರೇಮಿಗಳಿಗೆ ತಮ್ಮ ಪ್ರೇಮ ನಿ”ವೇದನೆ” ಮಾಡಿಕೊಳ್ಳುವ ದಿನ. ಎಷ್ಟೋ ದಿನದಿಂದ ಹುಡುಗ/ಹುಡುಗಿಯ ಹಿಂದೆ ಬಿದ್ದಿದ್ದವರು ಅಂದು ಅದೇನೋ ಮುಹೂರ್ತ ಇಟ್ಟಂತೆ ಆ ದಿನಕ್ಕೋಸ್ಕರ ಕಾದು ಒಂದು ಉಡುಗೊರೆ ಕೊಟ್ಟು ತಮ್ಮ ಪ್ರೇಮವನ್ನು ಹೇಳಿಕೊಳ್ಳುತ್ತಾರೆ. ಆ ದಿನ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ.
ಯೌಟ್ಯೂಬ್ ನಲ್ಲಿ ವಿಡಿಯೋ ವೊಂದು ವೈರಲ್ ಆಗಿದ್ದು, ಬಾಯ್ಫ್ರೆಂಡ್ ವ್ಯಾಲಂಟೈನ್ ಡೇ ದಿನದಂದು ಮೊಬೈಲ್ ಉಡುಗೊರೆ ನೀಡಿಲ್ಲ ಎಂದು ರಂಪಾಟ ಮಾಡಿದ್ದಾಳೆ. ಸಾರ್ವಜನಿಕಾವಾಗಿ ತನ್ನ ಪ್ರಿಯಕರನಿಗೆ ೫೦ ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಇದು ಚೀನಾದ ವಿಡಿಯೋ ಆಗಿದ್ದು, ಅಲ್ಲಿ ಮೇ 20 ಅನೌಪಚಾರಿಕವಾಗಿ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ. ಹುಡುಗಿ ಬಾರಿ ಬಾರಿಗೆ ಕೆನ್ನೆಗೆ ಬಾರಿಸುವಾಗ ಹುಡುಗ ಕಲ್ಲಿನಂತೆ ನಿಂತು ಬಿಟ್ಟಿದ್ದಾನೆ.. ವಿಡಿಯೋ ನೋಡಿ

Leave a Reply