ಕನಿಷ್ಠ ವಾರಕ್ಕೊಮ್ಮೆ ನಿಮ್ಮ ಮಕ್ಕಳಿಗೆ ಮೀನುಗಳನ್ನು ತಿನ್ನಿಸುವುದು ಅವರ ಬುದ್ಧಿ ಶಕ್ತಿ (ಐಕ್ಯೂ) ಹೆಚ್ಚಿಸಲು, ಅವರ ಮಾನಸಿಕ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಕಾರಣವಾಗುತ್ತದೆ ಎಂದು ಇತ್ತೀಚಿನ ಅಧ್ಯಯನ ಹೇಳುತ್ತದೆ.
ಹೆಚ್ಚಿದ ಮೀನು ಸೇವನೆಯು ನಿದ್ರಾಹೀನತೆಯನ್ನು ಕಡಿಮೆಗೊಳಿಸುತ್ತದೆ. ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಉತ್ತಮ ಪಡಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ನಿದ್ರಾಹೀನತೆಯು ಸಮಾಜ ವಿರೋಧಿ ನಡವಳಿಕೆಗೆ ಸಂಬಂಧಿಸಿದೆ, ಕಳಪೆ ಜ್ಞಾನ ಗ್ರಹಣವು ಸಮಾಜ ವಿರೋಧಿ ನಡವಳಿಕೆಗೆ ಸಂಬಂಧಿಸಿದೆ “ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಡ್ರಿಯನ್ ರೈನ್ ಹೇಳಿದರು.
ಒಮೆಗಾ -3 ಪೂರಕಗಳು ಸಮಾಜ ವಿರೋಧಿ ನಡವಳಿಕೆಗಳನ್ನು ಕಡಿಮೆಗೊಳಿಸುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ, ಆದ್ದರಿಂದ ಮೀನಿನಲ್ಲಿ ಅದು ಇರುವುದರಿಂದ ಇದು ಆಶ್ಚರ್ಯಕರವಲ್ಲ” ಎನ್ನುತ್ತಾರೆ ಸಂಶೋಧಕರು.
ಈ ಅಧ್ಯಯನದ ಪ್ರಕಾರ “ಮೀನು ಸೇವನೆಯು ನಿಜಕ್ಕೂ ಧನಾತ್ಮಕ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸುತ್ತದೆ” ಎಂದು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜೆನ್ನಿಫರ್ ಪಿಂಟೊ ಮಾರ್ಟಿನ್ ಹೇಳಿದ್ದಾರೆ.