ನೋಯ್ಡಾ: ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನೋಯ್ಡಾದ ಗೌತಮ್ ಬುದ್ದ ನಗರದಲ್ಲಿ ನಡೆದಿದೆ.

ಹದಿನಾರರ ಹರೆಯದ ಹುಡುಗಿ ಹೊಲಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಈರ್ವರು ಆಕೆಯನ್ನು ಅಪಹರಿಸಿದ್ದರು. ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಗೈದು ಮರುದಿನ ಮನೆಯ ಬಳಿ ತೊರೆದು ಹೋಗಿದ್ದಾರೆ. ಹುಡುಗಿಯ ಮನೆಯವರ ದೂರಿನಂತೆ ಪೊಕ್ಸೋ ಕಾಯ್ದೆಯನುಸಾರ ದೂರು ಪೋಲೀಸರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

Leave a Reply