ಲಕ್ನೊ: ವರದಕ್ಷಿಣೆಯಾಗಿ ವರನ ಕೇಳಿದ್ದು ಬೈಕ್, ವಧುವಿನ ಮನೆಯವರು ಪಲ್ಸರ್ ಬೈಕ್‍ನ್ನು ಕೊಡಿಸಿದರು. ಪಲ್ಸರ್ ಬಂದಾಗ ಮದುವೆ ದಿನ ವರ ಹೊಸ ಡಿಮ್ಯಾಂಡ್ ಇರಿಸಿದ. ಈ ಬೈಕ್ ತನಗೆ ಬೇಡ ಅಪಾಚೆ ಬೈಕ್ ಬೇಕು. ಅದಕ್ಕೂ ವಧು ಮನೆಯವರು ಒಪ್ಪಿದರು. ನಂತರೆ ಚಿನ್ನದ ನೆಕ್ಲೆಸ್ ಹಾಕಬೇಕೆನ್ನುವ ಬೇಡಿಕೆ ವರನಿಂದ ಬಂತು.
ಸಂಗತಿ ಹೀಗೆ ಮುಂದುವರಿಯುವುದನ್ನು ಕಂಡಾಗ ವಧುವಿನ ಮನೆಯವರಿಗೆ ಕೋಪ ಬಂದಿದೆ. ವರ ಮತ್ತು ಆತನ ಸಂಬಂಧಿಕರು ಕಂಠಪೂರ್ತಿ ಮದ್ಯಕುಡಿದು ಬಂದಿದ್ದರು. ಇದೇ ವೇಳೆ ವಧುವಿನ ತಂದೆಯೊಂದಿಗೆ ಯಾರೋ ಕೆಟ್ಟದಾಗಿ ವರ್ತಿಸಿದ್ದಾರೆ. ನಂತರ ಪರಿಸ್ಥಿತಿ ತೀರ ಹದಗೆಟ್ಟಿತು.
ಬಂದ ಅತಿಥಿಗಳು ಎಲ್ಲರೂ ವಧುವಿನ ಕುಟುಂಬದ ಪರ ನಿಂತರು. ಸಂಗತಿ ಕೆಟ್ಟಿತು ಎಂದು ತಿಳಿದು ಕೆಲವರು ಮೆಲ್ಲನೆ ಜಾಗ ಖಾಲಿ ಮಾಡಿ ಅಲ್ಲಿಂದ ತಪ್ಪಿಸಿಕೊಂಡರು. ಆದರೆ ಕೋಪದಿಂದಿದ್ದ ವಧುವಿನ ಕುಟುಂಬದವರನ್ನು ಅವರನ್ನು ಹಾಗೆಯೆ ಹೋಗಗೊಡಲಿಲ್ಲ. ವರ ಮತ್ತು ಆತನ ಇನ್ನಿಬ್ಬರು ಸಂಬಂಧಿಕರನ್ನು ತಡೆದಿರಿಸಿಕೊಂಡರು. ನಂತರ ಅವರಲ್ಲಿ ಮೂವರನ್ನು ಸಮೀಪದ ಪಾರ್ಕಿಗೆ ಕರೆದುಕೊಂಡು ಹೋಗಿ ಅರ್ಧ ತಲೆ ಬೋಳಿಸಿದ್ದಾರೆ. ಹೀಗೆ ಮಾಡಿದ ಬಳಿಕ ಪೊಲೀಸರವಶಕ್ಕೊಪ್ಪಿಸಿದರು.