ನವದೆಹಲಿ: 2016ರಲ್ಲಿ ಗುಡ್ಡಿದೇವಿ ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದ ಮೊದಲ ಮಹಿಳೆ, ಯೋಜನೆಯ ಪ್ರಚಾರ ಸಾಮಗ್ರಿಗಳಲ್ಲಿ ಆಕೆಯ ಭಾವಚಿತ್ರ ಛಾಪಿಸಿ ಸರ್ಕಾರ ತನ್ನ ಸಾಧನೆ ಕುರಿತು ಪ್ರಚಾರ ಮಾಡುತ್ತಿದೆ. ಆದರೆ ಈಗ ಆಕೆ ಹಿಂದಿನಂತೆ ಬೆರಣಿ ತಟ್ಟಿ ಕತ್ತಲಲ್ಲಿ ಅಥವಾ ಕಟ್ಟಿಗೆ ಉರಿಸಿ ಅಡುಗೆ ಮಾಡುತ್ತಿರುವುದು ಬಿಬಿಸಿ ತನಿಖಾ ವರದಿಯಿಂದ ಬಯಲಾಗಿದೆ. ಹೀಗಾಗಿ ಗುಡ್ಡಿದೇವಿ ಮತ್ತೆ ಹಿಂದಿನ ಸ್ಥಿತಿಗೆ ಹಿಂತಿರುಗಿದ್ದಾರೆ. ಉಜ್ವಲಾ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 12 ಸಬ್ಸಿಡಿ ದರದ ಸಿಲಿಂಡರ್ ಗಳನ್ನು ನೀಡಲಾಗುತ್ತಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಗುಡ್ಡಿದೇವಿಗೆ ಕೇವಲ 11 ಸಬ್ಸಿಡಿ ದರದ ಸಿಲಿಂಡರ್‌ಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.

“ನಾವು 2016ರಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದಾಗ ಸಿಲಿಂಡರ್ ದರ 520 ರೂ. ಇತ್ತು. ಈಗ 770 ರೂ.ಗೇರಿದೆ. ಈ ಸಿಲಿಂಡರ್ ಪಡೆಯಲು ಅಷ್ಟೊಂದು ಹಣ ಎಲ್ಲಿಂದ ತರಲಿ” ಎಂದಾಕೆ ಪ್ರಶ್ನಿಸುತ್ತಾರೆ. ರಿಸರ್ಚ್ ಇನ್ಸಿಟ್ಯೂಟ್ ಫಾರ್ ಕಂಪಾಶನೇಟ್ ಇಕಾನಮಿಕ್ ಸಂಸ್ಥೆಯ ಇತ್ತೀಚಿನ ಸರ್ವೇ ಪ್ರಕಾರ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಈ ಯೋಜನೆಯ ಫಲಾನುಭವಿಗಳಲ್ಲಿ ಶೇ 85ರಷ್ಟು ಮಂದಿ ಇನ್ನೂ ಬೆರಣಿ ಅಥವಾ ಕಟ್ಟಿಗೆ ಉರಿಸಿಯೇ ಅಡುಗೆ ಮಾಡುತಿದ್ದಾರೆ.

Leave a Reply