ಇತ್ತೀಚಿಗೆ ಗುಜರಾತ್ನ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಮನೆಯ ಬಾತ್ರೂಮ್ ನಲ್ಲಿ ಶಬ್ದ ಕೇಳಿ ಎಚ್ಚರಗೊಂಡಿದ್ದು, ಸ್ನಾನಗೃಹದಲ್ಲಿ ಮೊಸಳೆಯೊಂದು ಕಂಡು ಆಘಾತಗೊಂಡ ಘಟನೆ ವರದಿಯಾಗಿದೆ. ವಡೋದರಾ ನಿವಾಸಿ ಮಹೇಂದ್ರ ಎಂಬುವರು ಮಧ್ಯರಾತ್ರಿ ತಮ್ಮ ಮನೆಯ ಬಾತ್ರೂಮಿಗೆ ಹೋದಾಗ ಬಹುಶಃ ಬಾತ್ರೂಮಿನಲ್ಲಿ ಬೆಕ್ಕು ಇರಬೇಕು ಎಂದು ಬಾಗಿಲು ತೆರೆದು ನೋಡಿದಾಗ ದವಡೆ ತೆರೆದು ಮೊಸಳೆ ಅವರನ್ನು ನೋಡುತ್ತಿರುವುದನ್ನು ಕಂಡು ದಂಗಾಗಿದ್ದಾರೆ.

ಮೊಸಳೆ ಸುಮಾರು ನಾಲ್ಕೂವರೆ ಅಡಿ ಗಾತ್ರದ್ದಾಗಿದೆ. ಬಳಿಕ ಅವರು ಸಹಾಯಕ್ಕಾಗಿ ವನ್ಯಜೀವಿ ಪಾರುಗಾಣಿಕಾ ಟ್ರಸ್ಟ್ ನ ಮೊರೆ ಹೋಗಿದ್ದು ರಾತ್ರಿ 2:45 ರ ಹೊತ್ತಿಗೆ ಮೊಸಳೆಯನ್ನು ರಕ್ಷಿಸಿದರು. ಮೊಸಳೆಯನ್ನು ರಕ್ಷಿಸುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ರಾತ್ರಿ ಆಗಿದ್ದರಿಂದ ಮೊಸಳೆಯನ್ನು ಹಿಡಿಯಲು ಸ್ವಲ್ಪ ಕಠಿಣವಾಗಿತ್ತು. ಮೊಸಳೆ ಬಹಳ ಆಕ್ರಮಣಕಾರಿ ಆಗಿತ್ತು ಎಂದು ಟ್ರಸ್ಟ್ ನ ಸದಸ್ಯಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

LEAVE A REPLY

Please enter your comment!
Please enter your name here