ಹಾದಿಯಾ ಪ್ರಕರಣದ ತನಿಖೆಯನ್ನು ಎನ್.ಐ.ಎ ಮುಕ್ತಾಯಗೊಳಿಸುತ್ತಿದೆ. ಒತ್ತಡದ ಮತಾಂತರ ನಡೆದಿಲ್ಲವೆಂಬುದು ಹಾದಿಯಾ ಪ್ರಕರಣದಲ್ಲಿ ಬಹಿರಂಗವಾದ ಕಾರಣ ತನಿಖೆಯನ್ನು ಮುಕ್ತಾಯಗೊಳಿಸಿದೆ.

ಪ್ರಕರಣದಲ್ಲಿ ಕ್ರಿಮಿನಲ್ ಆರೋಪವು ಸಾಬೀತಾಗದ ಕಾರಣ ಸುಪ್ರೀಮ್ ಕೋರ್ಟಿಗೆ ವರದಿಯನ್ನು ಸಲ್ಲಿಸದಿರಲು ಎನ್.ಐ.ಎ ತೀರ್ಮಾನಿಸಿದೆ. ಹಾದಿಯಾ ಶಫೀನ್ ಜಹಾನ್ ವಿವಾಹದಲ್ಲಿ ಒತ್ತಡದಿಂದ ಬಲಾತ್ಕಾರವಾಗಿ ಮತಾಂತರ ನಡೆಸಲಾಗಿದೆಯೆಂದು ಸಂಬಂಧಿಕರು ಸಲ್ಲಿಸಿದ 89 ದೂರುಗಳಲ್ಲಿ ಲವ್ ಜಿಹಾದ್ ಆರೋಪದ ಹನ್ನೊಂದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಆಯೋಗ ಪರಿಗಣಿಸಿತ್ತು.

ಮತಾಂತರಕ್ಕೆ ಸಂವಿಧಾನ ಬದ್ಧವಾಗಿ ಅನುಮತಿಯಿರುವುದರಿಂದ ಅದಕ್ಕೆ ನೆರವಾಗುವುದನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು ತನಿಖಾ ಸಂಸ್ಥೆ ತಿಳಿಸಿತು.

Leave a Reply