“ನನ್ನ ಮಗ ತಪ್ಪು ಮಾಡಿದ್ದರೆ ಆತನನ್ನು ಗಲ್ಲಿಗೇರಿಸಿ, ಅದು ಬಿಟ್ಟು ಗುಜರಾತಿನಲ್ಲಿ ಉತ್ತರ ಭಾರತೀಯರ ಮೇಲೆ ದಾಳಿ ಮಾಡದಿರಿ” ಎಂದು ಪುಟ್ಟ ಹಸುಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯ ತಾಯಿ ರಾಮವತಿ ದೇವಿ ಮನವಿ ಮಾಡಿದ್ದಾರೆ.

ಬಿಹಾರದ ಈ ತಂದೆ ತಾಯಿಯ ಮಗನ ಮೇಲೆ ಹದಿನೈದು ತಿಂಗಳ ಹಸುಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪವಿದ್ದು, ಈ ನಿಟ್ಟಿನಲ್ಲಿ ಬಿಹಾರಿ ಮತ್ತು ಉತ್ತರ ಪ್ರದೇಶದವರ ಮೇಲೆ ಗುಜರಾತ್ ನಲ್ಲಿ ಹಲ್ಲೆ ಮಾಡಲಾಗುತ್ತಿದೆ.

ನಮ್ಮ ಮಗ ನಾಬಾಲಿಗ್ ಆಗಿದ್ದು, ಆತ ಮಾನಸಿಕವಾಗಿಯೂ ದುರ್ಬಲನಾಗಿದ್ದಾನೆ. ಆತನ ಆರೋಪ ಸಾಬೀತಾದರೆ ಆತನನ್ನು ಗಲ್ಲಿಗೇರಿಸಿ, ಇತರ ನಿರಪರಾಧಿ ಬಿಹಾರಿಗಳ ಮೇಲೆ ಹಲ್ಲೆ ಮಾಡದಿರಿ ಎಂದು ರೇಪ್ ಆರೋಪಿಯ ತಂದೆ ಮನವಿ ಮಾಡಿದ್ದಾರೆ.

Leave a Reply