ಸಿಬಿಎಸ್ ಸಿ ಟಾಪರ್ ಹಂಸಿಕಾ,ತಾನು 1 ಅಂಕ ಕಳೆದುಕೊಂಡದ್ದಕ್ಕೆ ಸೋಷಿಯಲ್ ಮೀಡಿಯಾವೇ ಕಾರಣ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಿಬಿಎಸ್ಸಿ ಯ 12ನೇ ತರಗತಿಯ ಪರೀಕ್ಷೆಯಲ್ಲಿ 500 ರಲ್ಲಿ 499 ಅಂಕ ಪಡೆದು ಕರಿಷ್ಮಾ ಅರೋರಾ ಜತೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದ ಗಾಝಿಯಾಬಾದ್(ಉ.ಪ್ರ.)ನ ಹಂಸಿಕಾ ಶುಕ್ಲಾ 1 ಅಂಕ ಕಳೆದುಕೊಂಡದ್ದಕ್ಕೆ ಸೋಷಿಯಲ್ ಮೀಡಿಯಾ ವನ್ನು ಹೊಣಿಗಾರರಾಗಿಸಿದ್ದಾರೆ. “ಆನ್ಲೈನ್ ಚಾಟ್ ಅಥವಾ ಗೇಮ್ ಆಡುವುದರ ಬದಲು ಕಲಿಕೆಯಲ್ಲಿ ಗಮನ ಹರಿಸಿದ್ದಿದ್ದರೆ ಇಂಗ್ಲಿಷ್ ನಲ್ಲಿ 1 ಅಂಕ ಕಳೆದುಕೊಳ್ಳುತ್ತಿರಲಿಲ್ಲ ” ಎಂದು ಹಂಸಿಕಾ ಹೇಳಿದರು. ಪರೀಕ್ಷಾ ತಯಾರಿಗಾಗಿ ಯಾವುದೇ ಟ್ಯೂಷನ್ ಕೂಡಾ ತೆಗೆದಿಲ್ಲವೆಂದು ಹಂಸಿಕಾ ತಿಳಿಸಿದ್ದಾರೆ. ತಾನು ಐಎಎಸ್ ಅಧಿಕಾರಿಯಾಗುವುದು ತನ್ನ ಕನಸು ಎಂದು ಹಂಸಿಕಾ ಹೇಳಿದ್ದಾರೆ.

Leave a Reply