1) ಜೀವನದಲ್ಲಿ ಎರಡು ತತ್ವಗಳನ್ನು ಪಾಲಿಸಿರಿ: ನಿಮ್ಮ ಸಂಬಂಧಿಕರು ಹಾಗೂ ನಿಮ್ಮ ಸ್ನೇಹಿ
ತರು ಸುಖ-ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ ಎಂದಾದರೆ ಆಮಂತ್ರಣವಿಲ್ಲದೆ ನೀವು ಅವರ ಮನೆಗಳಿಗೆ ಹೋಗದಿರಿ. ಒಂದು ವೇಳೆ ನಿಮ್ಮ ಸಂಬಂಧಿಕರು ಹಾಗೂ ನಿಮ್ಮ ಸ್ನೇಹಿತರು ಸಂಕಷ್ಟ ಹಾಗೂ ದುಃಖದಲ್ಲಿದ್ದರೆ ಅವರ ಆಮಂತ್ರಣಕ್ಕೆ ಕಾಯದೆ ಅವರ ಬಳಿ ಧಾವಿಸಿರಿ.

2) ಎಲ್ಲಿ ಪ್ರೀತಿ ಇದೆ, ಆದರೆ ಗೌರವವಿಲ್ಲ; ಅಲ್ಲಿ ಪ್ರೀತಿಯೂ ಬಾಕಿ ಉಳಿಯುವುದಿಲ್ಲ. ಎಲ್ಲಿ ಗೌರವವಿದೆ, ಆದರೆ ಪ್ರೀತಿ ಇಲ್ಲ; ಅಲ್ಲಿ ಪ್ರೀತಿಯು ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ.

3) ಮಕ್ಕಳಿಗೊಂದು ಉಪದೇಶ:-ತನ್ನ ಹೆತ್ತ ಮಕ್ಕಳಿಗಾಗಿ ತಂದೆಯು, ಮಕ್ಕಳು ಎಂದಿಗೂ ಅಲ್ಲಿ ಕಾಲಿಡಲೂ ಬಯಸದ ಜಾಗದಲ್ಲೂ ಹೋಗಿ ಬೆವರು-ರಕ್ತ ಸುರಿಸಿ ಹಗಲು-ರಾತ್ರಿ ದುಡಿಯುತ್ತಾರೆ. ಆ ತ್ಯಾಗಮಯಿ ತಂದೆಯನ್ನು ಗೌರವಿಸಿರಿ.

4) ಮಳೆ ನೀರಿನಲ್ಲಿ ನೆನೆಯುವವರನ್ನು ನಾಕಂಡೆ. ಜೇಬಿನಲ್ಲಿ ನಾಣ್ಯಗಳಿದ್ದವರು ನಿಶ್ಚಿಂತೆಯಿಂದ ನೆನೆಯುತ್ತಿದ್ದರು. ಜೇಬಿನಲ್ಲಿ ನೋಟುಗಳಿದ್ದವರು ಆಸರೆಗಾಗಿ ತಡಕಾಡುತ್ತಿದ್ದರು.

5) ದೇವನು 18000ಕ್ಕೂ ಮಿಕ್ಕಿ ಸೃಷ್ಟಿಗಳನ್ನು ಸೃಷ್ಟಿಸಿದ್ದಾನೆ. ಅವುಗಳಲ್ಲಿ ಮಾನವನು ಮಾತ್ರ ಹಣ ಸಂಪಾದಿಸುತ್ತಾನೆ. ಇತರೆಲ್ಲ ಸೃಷ್ಟಿಗಳ ಹೊಟ್ಟೆ ತುಂಬುತ್ತದೆ. ಆದರೆ ಮಾನವನ ಹೊಟ್ಟೆ ಮಾತ್ರ ಎಂದಿಗೂ ತುಂಬುವುದಿಲ್ಲ. ಇದು ಆಶ್ಚರ್ಯವಲ್ಲವೇ?

6) ಈ ಜಗತ್ತಿನಲ್ಲಿ ಮನುಷ್ಯನಿಗೆ ಮೂರು ವಿಧದ ಮನಷ್ಯರು ಇಷ್ಟವಾಗುತ್ತಾರೆ. ಒಂದು ಈಗಾಗಲೇ ಸಾವನ್ನಪ್ಪಿದವರು, ಎರಡನೆಯದು ಇನ್ನೂ ಜನಿಸದ ಮಗು, ಮೂರನೆಯವರು ಇಷ್ಟರವರೆಗೆ ಭೇಟಿಯಾಗದ ಅಪರಿಚಿತ ವ್ಯಕ್ತಿ. ಆದುದರಿಂದ ಜೀವನದಲ್ಲಿ ಮುಂದುವರೆಯಬೇಕಾದರೆ ಜನರ ಮಾತಿಗೆ ಕಿವಿಗೊಡದೆ ಮುಂದೆ ಸಾಗಿರಿ. ವಿಜಯ ಹೊಂದುವಿರಿ.

Leave a Reply