1. ಒಂದೆಲಗ ಅಥವಾ ಉರಗದ ಸೊಪ್ಪಿನ ರಸವನ್ನು ಒಂದು ಚಮಚ ಶುದ್ಧ ಜೇನುತುಪ್ಪ ಬೆರೆಸಿ ನಿತ್ಯವೂ ಮಕ್ಕಳಿಗೆ ನೀಡಿದರೆ ಮಕ್ಕಳ ಸ್ಮರಣಶಕ್ತಿ ಹೆಚ್ಚುತ್ತದೆ.
2. ಇದು ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ ಅಲ್ಲದೆ ರಕ್ತಹೀನತೆಯನ್ನೂ ನಿವಾರಿಸುತ್ತದೆ.
3. ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅರ್ಧ ಚಮಚದಿಂದ ನಾಲ್ಕು ಚಮಚದವರಗೆ ಜೇನುತುಪ್ಪ ಬೆರೆಸಿ ನೀಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಬುದ್ಧಿಶಕ್ತಿಯ ಹೆಚ್ಚಳವಾಗಲಿದೆ.
4. ದೇಹವನ್ನು ತಂಪಾಗಿರಿಸಲು ಊಟದೊಂದಿಗೆ ಒಂದೆಲಗ ಚಟ್ಟಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಿತಕರ.
5. ಒಂದೆಲಗ ತೈಲವನ್ನು ತಲೆಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯಲಿದೆ.
6. ಮಕ್ಕಳಿಗೆ ಉಪಯುಕ್ತ ಆರೋಗ್ಯವರ್ಧಕ ಪಾನೀಯವಾಗಿ ಒಂದೆಲಗ ಬಳಸಬಹುದು. ಒಂದು ಕಪ್ ಹಸುವಿನ ತುಪ್ಪಕ್ಕೆ ಅಷ್ಟೇ ಪ್ರಮಾಣದಲ್ಲಿ ಒಂದೆಲಗದ ಎಲೆಯ ರಸವನ್ನು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ಈ ತುಪ್ಪದ ನಿತ್ಯ ಸೇವೆನೆಯಿಂದ ಸ್ಮರಣಶಕ್ತಿ ಹೆಚ್ಚುವುದಲ್ಲದೇ ದೇಹಕ್ಕೆ ಹೊಸ ಚೈತನ್ಯ ದೊರೆದಂತಹ ಅನುಭವವಾಗುವುದು.
7. ಸಾಮಾನ್ಯ ಆರೋಗ್ಯ ತೊಂದರೆಗಳು ಶೀತ, ಜ್ವರ, ಕಾಲರಾ ಬಾಧಿಸುತ್ತಿದ್ದಲ್ಲಿ ಒಂದೆಲಗದ ರಸ ಸೇವಿಸುವುವ ಮೂಲಕ ನಿರೋಧಕ ಶಕ್ತಿ ಪಡೆಯಬಹುದು. ಮೂತ್ರಕೋಶದ ಸೋಂಕು. ಭೇದಿ ನಿಯಂತ್ರಿಸುವಲ್ಲಿ ಇದು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.
8. ಈ ಗಿಡಮೂಲಿಕೆ ಸೇವಿಸಿದರೆ ನಿಮ್ಮಲ್ಲಿನ ಬಳಲಿಕೆಯು ದೂರವಾಗಿ ಶಕ್ತಿ ಬರುವುದು.
9. ಈ ಗಿಡಮೂಲಿಕೆಯನ್ನು ಆಡುವಾಗ ಬಿದ್ದು ಗಾಯಗಳಾಗಿದ್ದಲ್ಲಿ ಇದರ ರಸವನ್ನು ಬಳಸಬಹುದು.
10. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ. ಒಂದೊಮ್ಮೆ ಮಕ್ಕಳಲ್ಲಿ ನಿದ್ರೆ ಕಡಿಮೆ ಎನಿಸಿದಲ್ಲಿ ಮಕ್ಕಳ ತಲೆಗೂ ಒಂದೆಲಗದ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ನಿದ್ದೆಯೂ ಬರುತ್ತದೆ.
11. ಚರ್ಮದ ಆರೋಗ್ಯಕ್ಕೆ ಇದು ಬಹಳ ಪರಿಣಾಮಕಾರಿ. ರಕ್ತ ಪರಿಚಲೆನೆ ಹೆಚ್ಚಿಸಿ ಚರ್ಮದ ವ್ಯಾಧಿಗಳನ್ನು ಶಮನ ಗೊಳಿಸುತ್ತದೆ.