ನಮ್ಮ ದೇಹದ ಭಾರ ಹೊರುವ ನಮ್ಮ ಕಾಲುಗಳು ಬಹಳ ಬೇಗ ದಣಿಯುತ್ತವೆ. ಸರಿಯಾಗಿ ಕಾಳಜಿ ವಹಿಸದಿದ್ದಲ್ಲಿ ಕಾಲಿನೊಂದಿಗೆ ಸಂಪೂರ್ಣ ದೇಹವೇ ನೋವನುಭವಿಸುವ ಪರಿಸ್ಥಿತಿ ಬಂದೀತು…
ಯಾವ ರೀತಿಯ ಸ್ಯಾಂಡಲ್ ಶೂಸ್ ಧರಿಸುತ್ತೇವೆಯೋ ಆ ಮೂಲಕ ನಮ್ಮ ಪಾದಗಳು ಆರಾಮ ಅಥವಾ ನೋವು ಅನು ಭವಿಸುತ್ತವೆ. ಸಮತಟ್ಟಾಗಿದ್ದ, ಹಿಮ್ಮಡಿ ಇಲ್ಲದ ಪಾದರಕ್ಷೆಗಳನ್ನೇ ಧರಿಸಲು ಪ್ರಯತ್ನಿಸಬೇಕು. ಫ್ಯಾಶನ್‍ಗಿಂತಲೂ ಆರಾಮವೆನಿಸುವಂತಿರಬೇಕು. ಧರಿಸಿರುವ ಚಪ್ಪಲಿ ಕಾಲಿಗೆ ಬಿಗಿಯಾಗಿಯೂ ಅಥವಾ ಸಡಿಲ ವಾಗಿಯೂ ಇರದೆ ಖರೀದಿಸು ವಾಗಲೇ ಸರಿಯಾಗಿ ಹೊಂದಿಕೆ ಯಾಗುವಂತೆ ಪರೀಕ್ಷಿಸಬೇಕು.
ಬಹಳ ಹೊತ್ತು ನಿಲ್ಲುವ ಸಂದರ್ಭ ದಲ್ಲಿ ಮಧ್ಯೆ ಮಧ್ಯೆ ಕುಳಿತುಕೊಳ್ಳಲು ಪ್ರಯತ್ನಿಸಿ. ಹೆಚ್ಚಾಗಿ ಮಹಿಳೆಯರು ಅಡುಗೆ ಕೋಣೆಯಲ್ಲಿ ನಿಲ್ಲಬೇಕಾಗು ತ್ತದೆ. ಆಗಾಗ ಕುಳಿತುಕೊಳ್ಳಲು ಅಡುಗೆ ಕೋಣೆಯಲ್ಲೊಂದು ಸ್ಟೂಲ್ (ಕುರ್ಚಿ) ವ್ಯವಸ್ಥೆ ಇರಲಿ. ತರಕಾರಿ ಕಟ್ ಮಾಡುವಾಗ, ದೋಸೆ-ಚಪಾತಿ ಗಳನ್ನು ಕಾಯಿಸುವಾಗ ಕುಳಿತಿರಲು ಸ್ಟೂಲ್ ಸ್ವಲ್ಪ ಎತ್ತರವಿರಲಿ.
ದೇಹ ತೂಕ ನಮ್ಮ ಕಾಲುಗಳ ಮೇಲೆ ಬಿದ್ದು ಹೆಚ್ಚು ಕಾಲುನೋವು ಉಂಟಾಗುವುದು. ಅದಕ್ಕಾಗಿ ನಮ್ಮ ದೇಹದ ತೂಕವನ್ನು ಕಡಿಮೆ ಗೊಳಿಸಬೇಕು ಅಥವಾ ದೇಹದಲ್ಲಿ ಹೆಚ್ಚು ಕೊಬ್ಬು ಸೇರದಂತೆ ನೋಡಿಕೊಳ್ಳಬೇಕು. ಆ ಮೂಲಕ ಕಾಲುನೋವು, ಗಂಟು ನೋವು ಗಳನ್ನು ತಪ್ಪಿಸಬಹುದು.
ಕಾಲುಗಳಿಗೆ ಎಣ್ಣೆ ಸವರಿ ವೃತ್ತಾಕಾರದಲ್ಲಿ, ಉದ್ದಕ್ಕೆ, ಅಡ್ಡಲಾಗಿ ನೀವಿಕೊಳ್ಳಿ. ಪ್ರತಿಯೊಂದು ಉಗುರನ್ನೂ ಕೈ ಬೆರಳಿನಿಂದ ಒತ್ತಿಕೊಳ್ಳಿ (ಇದೊಂದು ರೀತಿಯ ವ್ಯಾಯಾಮ) ವಾರಕ್ಕೊಮ್ಮೆ ಉಗುರು ಬಿಸಿ ನೀರಿಗೆ ಒಂದು ಸ್ಪೂನ್ ಉಪ್ಪು, ಶ್ಯಾಂಪು ಅಥವಾ ದ್ರವ ರೂಪದ ಸೋಪ್ ಹಾಕಿ ಕಾಲು ಗಳನ್ನು 15-20 ನಿಮಿಷ ಇಡಿ. ನಂತರ ಉಗುರುಗಳನ್ನು ಮೊದಲು ನೇರವಾಗಿ ಆ ಮೇಲೆ ಎರಡೂ ಬದಿಗಳನ್ನು ಅರ್ಧ ವೃತ್ತಾಕಾರದಲ್ಲಿ ಕತ್ತರಿಸಿ. ಉಗುರಿನ ಬದಿಗಳು ಕಪ್ಪಾಗಿದ್ದರೆ ಅಥವಾ ಕೆಸರು, ಮಣ್ಣು ನಿಂತಿದ್ದರೆ ಟೂತ್‍ಪಿಕ್‍ನಿಂದಲೂ ತೆಗೆಯಬಹುದು. ಹಿಮ್ಮಡಿ ಒಡೆದಿದ್ದರೂ 20 ನಿಮಿಷ ನೆನೆದ ನಂತರ ಬ್ರಶ್ ಅಥವಾ ಪ್ಯೂಮಿಕ್ ಸ್ಟೋನ್ ನಿಂದ ತಿಕ್ಕಿದಾಗ ಒರಟಾದ ತರಿ ತರಿ ಎದ್ದ ಚರ್ಮಗಳು ಉದುರಿ ಮುಂದೆ ಚರ್ಮದ ಹೊಸ ಕೋಶ ಗಳು ಬೆಳೆಯುತ್ತವೆ. ನಂತರ ತಣ್ಣೀರಿನಿಂದ ಕಾಲುಗಳನ್ನು ತೊಳೆದು ಮೃದುವಾದ ಟವೆಲ್‍ನಿಂದ ನೀರಿನಂಶ ಉಳಿಯದಂತೆ ಒರೆಸಿ ತೆಗೆದು ಕ್ರೀಮ್ ಲೇಪಿಸಿಕೊಳ್ಳಿರಿ.
ಸಕ್ಕರೆ ಕಾಯಿಲೆ (ಡಯಾಬಿಟಿಸ್) ಇರುವವರು ಕಾಲಿನ ಆರೈಕೆಗಾಗಿ, ವ್ಯಾಯಾಮಕ್ಕಾಗಿ ತಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಸವೆದು ಹೋದ ಪಾದರಕ್ಷೆಗಳನ್ನು ಧರಿಸಿದರೂ ಪಾದಗಳು ಹೆಚ್ಚು ದಣಿಯವುದು. ಆ ಮೂಲಕ ಸೊಂಟ, ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು. ತುಂಡರಿಸಿದ ಪಾದರಕ್ಷೆಗಳಿಗೆ ಪಿನ್ ಹಾಕಿ ಉಪ ಯೋಗಿಸಲೂ ಪ್ರಯತ್ನಿಸದಿರಿ. ಈ ಮೂಲಕ ಕಾಲುಗಳ ಬಗ್ಗೆ ಸೂಕ್ತ ಕಾಳಜಿ ವಹಿಸಿದಲ್ಲಿ ದಿನವಿಡೀ ಲವಲವಿಕೆಯಿಂದಿರಬಹುದು.
ಕೆ.ಏ. ಉಡುಪಿ