ಇದು ನಮ್ಮ ಊರು : ಜೀವನದಲ್ಲಿ ಪ್ರತಿಯೊಬ್ಬರಿಗೂ ಸಲಹೆ ಸೂಚನೆ, ಸಮಾಲೋಚನೆ(counselling) ಅಗತ್ಯ ಇರುತ್ತದೆ. ಯಾಕೆಂದರೆ ಜೀವನ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಆದರೂ ಕೆಲವೊಮ್ಮೆ ನಮ್ಮ ಭಯ, ಅಹಂ ಇನ್ನಿತರ ವಾತಾವರಣ ನಮ್ಮನ್ನು ಸಮಾಲೋಚನೆ ಮಾಡದಂತೆ ತಡೆಯುತ್ತದೆ. ಹೇಗೆ ದೇಹಕ್ಕೆ ರೋಗ ಬಂದರೆ ಮದ್ದಿನ ಅಗತ್ಯ ಇದೆಯೋ ಹಾಗೆಯೆ ಮನಸ್ಸಿಗೂ ಕೆಲವೊಮ್ಮೆ ರೋಗ ಹಿಡಿಯುತ್ತದೆ. ಎಲ್ಲವೂ ಹುಚ್ಚು ಅಥವಾ ಮಾನಸಿಕ ಹುಚ್ಚು ಆಗಿರುವುದಿಲ್ಲ. ಮಾನಸಿಕ ಖಾಯಿಲೆಗಳಲ್ಲಿ ಹಲವು ಬಗೆ ಇದೆ. ಹಾಗೆಯೆ ಅವುಗಳು ಸಮಾಲೋಚನೆ ಅಥವಾ ಕೌನ್ಸೆಲ್ಲಿಂಗ್ ನಲ್ಲಿ ಪರಿಹಾರ ಆಗುತ್ತದೆ. ನಮಗೆ ಯಾವಾಗ ಸಮಾಲೋಚನೆ (counselling) ಅಗತ್ಯ ಬರುತ್ತದೆ ಎಂಬುದನ್ನು ಕೆಳಗೆ ನೋಡಿ

1. ಸಂಬಂಧಗಳಲ್ಲಿ ಬಿರುಕು ಉಂಟಾಗುವುದು ಮತ್ತು ಭಿನ್ನಾಭಿಪ್ರಾಯಗಳು, ಬಾಂಧವ್ಯದಲ್ಲಿ ಒಡಕು, ವೈವಾಹಿಕ ಮತ್ತು ಕೌಟುಂಬಿಕ ಕಲಹಗಳು.
2. ಕೋಪ, ಭಯ, ಉದ್ವೇಗ, ನೋವು, ಏಕಾಂಗಿತನ, ಒತ್ತಡ ಮುಂತಾದ ಸಂಕೀರ್ಣ ಭಾವನೆಗಳನ್ನು ಹೊಂದಿರುವುದು.
3. ನಿಂದನೆಗ ಒಳಗಾಗುವುದು : ದೈಹಿಕವಾಗಿ, ಲೈಂಗಿಕವಾಗಿ, ಮೌಖಿಕವಾಗಿ ಅಥವಾ ಮಾನಸಿಕವಾಗಿ ನಿಂದನೆಗೆ ಒಳಗಾಗುವುದು

4. ಉದ್ಯೋಗ, ವಿವಾಹ, ವಿಚ್ಛೇದನ, ಮಕ್ಕಳ ಪೋಷಣೆ, ಮುಪ್ಪು, ನಿವೃತ್ತಿ ಮುಂತಾದ ಸಂದರ್ಭದಲ್ಲಿ
5. ಆಡಳಿತ ಮಂಡಳಿಯೊಡನೆ ಸಂಘರ್ಷ, ಕಾರ್ಯಕ್ಷೇತ್ರದಲ್ಲಿ ಸಾಧನೆ, ವೃತ್ತಿ ಜೀವನದಲ್ಲಿನ ಆಸೆ – ಆಕಾಂಕ್ಷೆಗಳು, ಕಿರುಕುಳ ಇತ್ಯಾದಿ.
6. ಉದ್ವೇಗ, ಸ್ಕೀಜೋಫ್ರೇನಿಯಾ ಮೊದಲಾದ ಸಂದರ್ಭಗಳು ಎಂದುರಾದಾಗ.

7. ದುಶ್ಚಟಗಳು, ಪ್ರಾಣಹಾನಿ ಮತ್ತು ಆತ್ಮಹತ್ಯೆಯಂತಹ ಆಲೋಚನೆಗಳು ಬಂದಾಗ.
8. ಮನಸ್ಸಿಗೆ ಅತಿಹೆಚ್ಚು ನೋವು ಆದಾಗ ವಿಶೇಷವಾಗಿ ಸಾವುನೋವುಗಳು, ಅಗಲುವಿಕೆ, ವಿಯೋಗ ಮೊದಲಾದವುಗಳು ಎಂದುರಾದಾಗ.
9. ದೈಹಿಕ ಸಮಸ್ಯೆಗಳು, ಅಪಘಾತ ಮತ್ತು ಅಂಗವೈಕಲ್ಯದ ಸಮಸ್ಯೆಗಳು ಎದುರಾದಾಗ
10. ಅನಾರೋಗ್ಯ ಪೀಡಿತ ವ್ಯಕ್ತಿಗಳ ಆರೈಕೆ ಮಾಡಿ ಕಿರಿಕಿರಿ ಆದಾಗ.
ಮಕ್ಕಳಲ್ಲಿ ಮತ್ತು ಹದಿಹರೆಯದವರ ನಡವಳಿಕೆಯಲ್ಲಿನ ಬದಲಾವಣೆಗಳು, ಶೈಕ್ಷಣಿಕ ಒತ್ತಡಗಳು, ಕೌಟುಂಬಿಕ ಕಲಹದಿಂದ ಅವರ ಮೇಲಾಗುವ ಪರಿಣಾಮಗಳು, ಗೆಳೆತನ ನಿಭಾಯಿಸುವಿಕೆ, ಬೆದರಿಕೆ ಇತ್ಯಾದಿ ಎದುರಾದಾಗ

ಹೀಗೆ ಕೆಲವು ಪ್ರಮುಖ ಸಂದರ್ಭಗಳನ್ನು ಇಲ್ಲಿ ಹೇಳಲಾಗಿದೆ. ಆದರೂ ಸಮಾಲೋಚನೆ(counselling) ಎಂಬುದು ಜೀವನದ ಪ್ರತಿ ಹಂತದಲ್ಲೂ ಅಗತ್ಯವಿದೆ. ಇದರಿಂದ ಜೀವನಕ್ಕೆ ಧೈರ್ಯ, ಸವಾಲುಗಳನ್ನು ಎದುರಿಸುವ ಶಕ್ತಿ ಬರುತ್ತದೆ ಮತ್ತು ಹಲವು ತಪ್ಪು ನಿರ್ಧಾರಗಳಿಂದ ನಮ್ಮನ್ನು ರಕ್ಷಿಸಬಹುದು.

Leave a Reply