image credit : Shutterstock

ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಕಾಳಜಿ ವಹಿಸಬೇಕು. ನಿರಂತರವಾಗಿ ಕಲುಷಿತ ಹೊಗೆಯನ್ನು ಉಸಿರಾಡುವುದರಿಂದ  ಶ್ವಾಸಕೋಶದ ಹಾನಿಗೆ ಕಾರಣವಾಗುತ್ತದೆ.  ಇದರಿಂದ ರಕ್ಷಣೆ ಹೊಂದಲು ಹಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಧೂಳು ಕಲುಷಿತ ವಾಯು ನಮ್ಮ ದೇಹಕ್ಕೆ ಪ್ರವೇಶಿಸಿದರೆ ನಮ್ಮ ಶ್ವಾಸಕೋಶ ಕಿರಿಕಿರಿಯನ್ನು ಅನುಭವಿಸುತ್ತದೆ. ಬನ್ನಿ ಇದನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ತಿಳಿದುಕೊಳ್ಳಿ…

ಸ್ಟೀಮ್ ತೆರಪಿ

ಸ್ಟೀಮ್ ಮಾಡುವ ಮೂಲಕ ನಿಮ್ಮ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು. ಸ್ಟೀಮ್ ತೆರಪಿ ಶ್ವಾಸ ಕೋಶಕ್ಕೆ ತುಂಬಾ ಉತ್ತಮವಾಗಿದೆ.ಇದರಿಂದ ಶ್ವಾಸಕೋಶದಲ್ಲಿನ ಲೋಳೆಯು ಸಹ ಹೊರಬರುತ್ತದೆ. ಚಳಿಗಾಲದಲ್ಲಿ ಹೊಗೆಯ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿದಿನ ಸ್ಟೀಮ್ ಚಿಕಿತ್ಸೆಯನ್ನು ಬಳಸಿ ನಿಮ್ಮ ಶ್ವಾಸಕೋಶವು ರೋಗದಿಂದ ಮುಕ್ತವಾಗಿಸಿ.

ಗ್ರೀನ್ ಟೀ

ಗ್ರೀನ್ ಟೀ ಕೂಡ ನಮ್ಮ ಆರೋಗ್ಯಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಉತ್ತಮ ಜೀರ್ಣ ಕ್ರಿಯೆ ಜೊತೆಗೆ ತೂಕ ನಷ್ಟ ಕೂಡ ಇದರಲ್ಲಿ ಸಂಭವಿಸುತ್ತದೆ. ಮಾತ್ರವಲ್ಲ ಇದು ನಮ್ಮ ಶ್ವಾಸಕೋಶವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತೇನೆ. ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ಹಸಿರು ಚಹಾದಲ್ಲಿ ಶ್ವಾಸಕೋಶದಲ್ಲಿನ ಕಿರಿಕಿರಿ ಮತ್ತು ತುರಿಕೆ ಹೋಗಲಾಡಿಸುವ ಗುಣ ಇದೆ.

ಆಹಾರ

ಶ್ವಾಸ ಕೋಶದ ಕಾಳಜಿಯಲ್ಲಿ ಆಹಾರ ಕೂಡ ಬಹಳ ಮುಖ್ಯವಾಗಿದೆ. ಇದರಿಂದ ನಮ್ಮ ಸ್ವಾಸಕೋಶದ ಸಮಸ್ಯೆ ಮತ್ತು ಉಸಿರಾಟದ ಸಮಸ್ಯೆಯನ್ನು ನೀಗಿಸಬಹುದು. ಉದಾಹರಣೆಗೆ ಅರಿಶಿನ ವಾಲ್ನಟ್ ಬೀನ್ಸ್ ಹಸಿರು ಸೊಪ್ಪು ತರಕಾರಿಗಳು ಇವುಗಳನ್ನು ತಿನ್ನುವುದರಿಂದ ಶ್ವಾಸಕೋಶ ನೈಸರ್ಗಿಕವಾಗಿ ಸ್ವಚ್ಛವಾಗಿರುತ್ತದೆ.

ಜೇನು

ಜೇನುತುಪ್ಪ ಕೂಡ ಅಸ್ತಮಾ ಕ್ಷಯ ಗಂಟಲಿನ ಸೋಂಕು ಮತ್ತು ಶ್ವಾಸಕೋಶ ಸೇರಿದಂತೆ ಅನೇಕ ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಲು ಬಹಳ ಸೂಕ್ತವಾಗಿದೆ. ಪ್ರತಿದಿನ ಒಂದು ಟೀ ಸ್ಪೂನ್ ಸೇವಿಸುವುದು ಆರೋಗ್ಯಕ್ಕೆ ಬಹಳ ಉಪಕಾರಿ.

ನೀರಿನಿಂದ ತೊಳೆಯಿರಿ

ಹೊರಗೆ ಸಂಚರಿಸುವ ನಮ್ಮ ಶರೀರಕ್ಕೆ ಧೂಳು ಹೊಗೆ ಮತ್ತು ಕಲ್ಮಶಗಳು ಶ್ವಾಸಕೋಶವನ್ನು ತಲಪುತ್ತದೆ. ಆದ್ದರಿಂದ ಹೊರಗಿನಿಂದ ಮನೆಗೆ ಬಂದರೆ ಕೂಡಲೇ ಮೂಗು ಬಾಯಿ ಗಂಟಲನ್ನು ನೀರಿನಿಂದ ಶುದ್ಧೀಕರಿಸಿ.

LEAVE A REPLY

Please enter your comment!
Please enter your name here