ಮೂವಾಟ್ಟುಪುಯ: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮದ್ಯ ಕುಡಿಸಿ ಆಕೆ ಅರೆಪ್ರಜ್ಞಾವಸ್ಥೆಗೆ ಜಾರಿದಾಗ ಪ್ರೇಯಸಿಯ ಹದಿಹರೆಯ ಪುತ್ರಿಯನ್ನು ಅತ್ಯಾಚಾರ ಮಾಡಿದ ಘಟನೆ ವರದಿಯಾಗಿದೆ. ಅತ್ಯಾಚಾರ ಆರೋಪಿ ಸುರೇಶ್(50) ಎಂಬಾತನನ್ನು ಮೂವಾಟ್ಟು ಪುಯದ ಪೊಲೀಸರು ಬಂಧಿಸಿದ್ದು ಕೋರ್ಟು ಆತನಿಗೆ ರಿಮಾಂಡ್ ವಿಧಿಸಿದೆ.

ಮೂವಾಟ್ಟು ಪುಯದ ಆರಕ್ಕುಯಿ ಎಂಬಲ್ಲಿ ಆರೋಪಿ ಸುರೇಶ್ ಮಹಿಳೆಯ ಪುತ್ರಿಯನ್ನು ಅತ್ಯಾಚಾರ ಮಾಡುತ್ತಿದ್ದು, ಈತನ ಕಿರುಕುಳ ಸಹಿಸದಾದಾಗ ಸಂತ್ರಸ್ತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. .

ಯುವತಿಯ ಮನೆಗೆ ತಾಯಿಯೊಂದಿಗೆ ಸಂಬಂಧ ಬೆಳೆಸುತ್ತಾ ಬಂದಿದ್ದ ಸುರೇಶ್ ಮದ್ಯ ತಂದು ಕುಡಿಸುತ್ತಿದ್ದ. ತಾಯಿ ಕುಡಿದು ತೂರಾಡಿದಾಗ ಯುವತಿಯನ್ನು ಆತ ಅತ್ಯಾಚಾರಕ್ಕೆ ಗುರಿಪಡಿಸುತ್ತಿದ್ದ. ತನ್ನ ಕೃತ್ಯವನ್ನು ಇತರರಲ್ಲಿ ಹೇಳಿದರೆ ಕೊಲ್ಲುವುದಾಗಿ ಸುರೇಶ್ ಹೇಳಿದ್ದರಿಂದ ಎಲ್ಲವನ್ನೂಯುವತಿ ಸಹಿಸುತ್ತಿದ್ದಳು. ಇತ್ತೀಚೆಗೆ ಆತನ ಕಿರುಕುಳ ಸಹಿಸದಾದಾಗ ಯುವತಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಳು. ನಂತರ ಪೊಲೀಸರು ಸುರೇಶ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಸುರೇಶ್‍ಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply