ನವದೆಹಲಿ: ಕೊರೊನಾ ವೈರಾಣು ಸೋಂಕಿನ ಕಾಯಿಲೆಗಿಂತ ಲಾಕ್‌ಡೌನ್ ಹೆಚ್ಚು ಜನರ ಪ್ರಾಣವನ್ನು ತೆಗೆಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳಿನಿಂದ ಹಲವು ಕ್ಷೇತ್ರಗಳ ತಜ್ಞರ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಬುಧವಾರ ಸ್ವೀಡನ್ನಿನ ಕಾರೊಲಿನ್ಸ್ಕಾ ಇನ್ಸ್ಟಿಟ್ಯೂಟ್ ನ ಪ್ರೊ ಜೊಹಾನ್ ಗೀಸೇಕ್ ಮತ್ತು ಹಾರ್ವಡ್ ವಿವಿಯ ಪ್ರೊ ಆಶೀಷ್ ಝಾ ಅವರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸೋಂಕಿನ ಕೆಲವು ಆಯಾಮಗಳನ್ನು ತಜ್ಞರೊಂದಿಗೆ ಚರ್ಚಿಸಿದ್ದು, ಸಾಂಕ್ರಾಮಿಕ ವೈರಾಣುವಿನಿಂದ ಉಂಟಾಗಿರುವ ಪರಿಣಾಮಗಳು ಅದಕ್ಕೆ ತೆಗೆದುಕೊಂಡ ಕ್ರಮಗಳಿಂದಾದ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸಾಂಕ್ರಾಮಿಕ ಜಾಡ್ಯಕ್ಕಿಂತ ಲಾಕ್ ಡೌನ್ ಹೆಚ್ಚು ಮಾರಣಾಂತಿಕ ಎಂದು ಅಭಿಪ್ರಾಯಪಟ್ಟಿರುವ ಪ್ರೊ ಜೊಹಾನ್ ಗೀಸೆಕ್, ಭಾರತ ಅತ್ಯಂತ ತೀವ್ರವಾದ ದಿಗ್ಧಂಧನ ಹೇರಿದಲ್ಲಿ, ಅದರ ಆರ್ಥಿಕತೆ ಸಂಪೂರ್ಣವಾಗಿ ತಳ ಕಚ್ಚುತ್ತದೆ. ಕೊರೊನಾ ಸೋಂಕು ಸೌಮ್ಯವಾಗಿರುವ ಕಾಯಿಲೆಯಾಗಿದ್ದು, ಬಹುತೇಕ ಎಲ್ಲರಿಗೂ ತಗುಲುತ್ತದೆ. ಅನೇಕರಿಗೆ ತಗುಲಿದ್ದರೂ ಅವರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಹಿರಿಯ ನಾಗರಿಕರು ಮತ್ತು ಹಲವು ಆರೋಗ್ಯ ಸಮಸ್ಯೆಗಳಿರುವವರು ಸ್ವಲ್ಪ ಎಚ್ಚರಿಕೆಯಿಂದಿರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದಿಗ್ಟಂಧನವನ್ನು ಏಕಾಏಕಿ ತೆಗೆದುಹಾಕುವುದಕ್ಕಿಂತ ಹಂತಹಂತವಾಗಿ ಅದನ್ನು ಸಡಿಲಿಸುವುದು ಒಳಿತು ಎಂದು ಇಬ್ಬರೂ ತಜ್ಞರು ಹೇಳಿದ್ದಾರೆ. ಈ ವೈರಾಣು ಇನ್ನೂ 12 ರಿಂದ 18 ತಿಂಗಳು ಅಸ್ತಿತ್ವದಲ್ಲಿರುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ.

LEAVE A REPLY

Please enter your comment!
Please enter your name here