ಬುಲ್ದಾನಾ: ಮಹಾರಾಷ್ಟ್ರದ ಬುಲ್ದಾನಾ ಹಿಂದೂ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಅನಾರೋಗ್ಯಪೀಡಿತ ಮುಸ್ಲಿಂ ಚಾಲಕನ ಆರೋಗ್ಯಕ್ಕಾಗಿ ಪ್ರತಿದಿನ ರಂಜಾನ್ ಉಪವಾಸ ಕೈಗೊಂಡು ಸೌಹಾರ್ದತೆಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಬುಲ್ದಾನಾ ಅರಣ್ಯ ಅಧಿಕಾರಿ ಸಂಜಯ್ ಮಾಳಿಯವರ ಬಳಿ ಚಾಲಕ ಜಾಫರ್ ಕೆಲಸ ಮಾಡುತ್ತಿದ್ದು, ಅವರು ಅನಾರೋಗ್ಯದ ಮಧ್ಯೆಯೂ ಜಾಫರ್ ಮಾಳಿ ಅವರ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಸಂಜಯ್ ಯವರು ಅವರ ಪರವಾಗಿ ತಾನು ದಿನಾ ಉಪವಾಸ ವ್ರತ ಆಚರಿಸುತ್ತಿದ್ದಾರೆ. ಉಪವಾಸದ ತಿಂಗಳಲ್ಲಿ ಜಾಫರ್ ತನ್ನ ಕರ್ತವ್ಯ ನಿರ್ವಹಿಸಿ ಕೆಲಸ ಮಾಡುವುದಾದರೆ, ನಾನೇಕೆ ಉಪವಾಸ ಆಚರಿಸಬಾರದು ಎಂದು ಸಂಜಯ್ ಕೇಳುತ್ತಾರೆ.
Maharashtra: Sanjay N Mali, Divisional Forest Officer in Buldhana, is keeping 'roza' (fasting) in place of his driver Zafar; says, "on 6 May I asked him if he'll keep roza. He said he won't as his health doesn't support him because of duty. So I told him I'll do it in your place" pic.twitter.com/omNMg4B3yg
— ANI (@ANI) May 31, 2019