ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ಇದಕ್ಕೂ ಮುಂಚೆ ಸಾಥ್ ಸಾಥ್ ಹೈ ನಾವೆಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ಅಲ್ಲಿನ ಸ್ಥಳೀಯರು ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಶಿಷ್ಟ ಸೌಹಾರ್ದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಚಂದ್ರಶೇಖರ್ ಆಜಾದ್ ಪಾರ್ಕಿನಲ್ಲಿ ಆಜಾದ್ ರವರ ಪ್ರತಿಮೆಯ ಮುಂದೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪುರೋಹಿತರು, ಚಿಂತಕರು, ಬುದ್ಧಿಜೀವಿಗಳು ಭಾಗವಹಿಸಿದ್ದರು.

ಅಯೋಧ್ಯೆ ಪ್ರಕರಣದಲ್ಲಿ ಯಾವುದೇ ರೀತಿಯ ತೀರ್ಪು ಬಂದರೂ ನಾವೆಲ್ಲರೂ ಅದನ್ನು ಒಪ್ಪಿಕೊಳ್ಳುತ್ತೇವೆ. ತೀರ್ಪು ಏನೇ ಇರಲಿ ನಾವದನ್ನು ಆಚರಿಸುವುದಿಲ್ಲ ಅಥವಾ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂಬ ಸೌಹಾರ್ದ ಸಂದೇಶವನ್ನು ಅವರೆಲ್ಲರೂ ನೀಡಿದ್ದಾರೆ.

ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ಈ ತೀರ್ಪಿಗೆ ನಾವು ಸಕಾರಾತ್ಮಕ ಸಂದೇಶಗಳನ್ನು ನೀಡಬೇಕಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೆ ದೇಶದ ನ್ಯಾಯಾಂಗದ ಬಗ್ಗೆ ಆಳವಾದ ನಂಬಿಕೆ ಇದೆ. ನಾವು ಇಡೀ ದೇಶಕ್ಕೆ ಶಾಂತಿಯ ಸಂದೇಶವನ್ನು ನೀಡಬೇಕಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೇಳಿದರು. ನ್ಯಾಯಾಂಗವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬಲವಾದ ಅಡಿಪಾಯ. ಇದು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕ ಶಾಂತಿ ಮತ್ತು ಸಮಾಧಾನವನ್ನು ಬಯಸುತ್ತಾರೆ ಎಂದು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here