ಬೆಂಗಳೂರು: ಮುಸ್ಲಿಮ್ ಸಮುದಾಯವನ್ನು ಪ್ರತ್ಯೇಕವಾಗಿ ನೋಡುತ್ತಿರುವ ಹಿನ್ನೆಲೆಯಲ್ಲಿ ಅನ್ಯ ಧರ್ಮದವರೂ ಮಸೀದಿಯ ಮಹತ್ವ ಅರಿಯಲಿ, ಕಂದಕ ತೊರೆಯಲಿ, ಸೌಹಾರ್ದತೆ ಬೆಳೆಯಲೆಂಬ ಭಾವದಿಂದ ಬೆಂಗಳೂರಿನಲ್ಲಿರುವ 170 ವರ್ಷದ ಹಿಂದಿನ ಮಸೀದಿಗೆ ‘ವಿಸಿಟ್ ಮೈ ಮೊಸ್ಕ್ ಡೇ’ ಹೆಸರಿನಲ್ಲಿ ಹಿಂದೂ, ಜೈನ, ಸಿಖ್, ಕ್ರೈಸ್ತರು ಸೇರಿದಂತೆ ಹಲವಾರು ಮುಸ್ಲಿಮರೇತರರಿಗೆ ಪ್ರವೇಶ ಕಲ್ಪಿಸುವಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಸೀದಿಯೊಳಗಿರುವಾಗ ಯಾವುದೇ ವಿವಾದಾತ್ಮಕ ವಿಷಯ ಪ್ರಸ್ತಾಪಿಸುವಂತಿಲ್ಲ ಹಾಗೂ ರಾಜಕಾರಣ ಮತ್ತು ರಾಜಕಾರಣಿಗಳನ್ನು ನಿರ್ಬಂಧಿಸಿದ ಈ ಕಾರ್ಯಕ್ರಮಕ್ಕೆ ಸುಮಾರು 400ಕ್ಕೂ ಹೆಚ್ಚು ಜನರು ಸಾಕ್ಷಿಯಾದರು.

ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 400 ಜನರಿಗೆ ಮಸೀದಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಶಿವಾಜಿನಗರ ಬಳಿಯ ಟಾಸ್ಕರ್ ಟೌನ್‌ನಲ್ಲಿನ ಮೋದಿ ಅಬ್ದುಲ್ ಗಫಾರ್ ಮಸೀದಿ ಎದುರಿಗೆ “ವಿಸಿಟ್ ಮೈ ಮೊಸ್ಕ್ ಡೇ ‘ (ಮಸೀದಿಗೆ ಭೇಟಿ ನೀಡಿ) ಎಂದು ಬೋರ್ಡ್ ತೂಗುಹಾಕಿ ಮುಕ್ತ ಆಹ್ವಾನ ಕಲ್ಪಿಸಲಾಗಿತ್ತು. ಅಂತರ್ ಧರ್ಮಗಳ ನಡುವಿನ ಸಂವಾದ ಉತ್ತೇಜಿಸಲು ಹಾಗೂ ಮುಸ್ಲಿಮೇತರರು ಮುಸ್ಲಿಂ ಧರ್ಮ, ಮಸೀದಿಯ ಕಾರ್ಯಚಟುವಟಿಕೆ ಬಗ್ಗೆ ಅರ್ಥಮಾಡಿಕೊಳ್ಳಬೇಕು. ತಪ್ಪು ಭಾವನೆಗಳಿಗೆ ಅವಕಾಶ ಇರಬಾರದು. ಸಮಾಜದಲ್ಲಿನ ಕಂದಕ ದೂರಸರಿಸಬೇಕೆಂಬ ಮಹತ್ವಾಕಾಂಕ್ಷೆಯ ಫಲವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.

LEAVE A REPLY

Please enter your comment!
Please enter your name here