ಉತ್ತರ ಪ್ರದೇಶದಲ್ಲಿ ಮಂದಿರ ಮತ್ತು ಮಸೀದಿಯು ಅಕ್ಕಪಕ್ಕದಲ್ಲಿದ್ದು ಇವೆರಡೂ ಶತಮಾನಗಳಿಂದ ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಮಂದಿರ ಮತ್ತು ಮಸೀದಿಗಳು ಜನರ ಮನಸ್ಸನ್ನು ಭ್ರಷ್ಟಗೊಳ್ಳುವುದರಿಂದ ರಕ್ಷಿಸುವ ಸಲುವಾಗಿ ನಿರ್ಮಾಣಗೊಂಡಿದೆಯೇ ಹೊರತು ಮಂದಿರ ಮಸೀದಿಗಾಗಿ ಮನುಷ್ಯರ ಪರಸ್ಪರ ಕಚ್ಚಾಡುತ್ತಿರುವುದು ವಿರೋಧಾಭಾಸವಾಗಿದೆ.

ಭೈರವ್ ಮಂದಿರದಲ್ಲಿ ರಾಮ್‌ಲೀಲಾ ನಡೆಯುತ್ತಿರುವಾಗ, ಮುಸ್ಲಿಮರು ಪಕ್ಕದ  ಮಸೀದಿಯಲ್ಲಿ ನಮಾಜ್ ನೆರವೇರಿಸುತ್ತಿದ್ದರು. ಈ ಸಾಮರಸ್ಯವು ಕಳೆದ ಮೂರು ಶತಮಾನಗಳಿಂದಲೂ ಮುಂದುವರೆದಿದೆ. ಈ ವರ್ಷ ಈ ಸೌಹಾರ್ದತೆ 350 ವರ್ಷಗಳನ್ನು ಪೂರೈಸಿದೆ. ಮಂದಿರ ಮತ್ತು ಮಸೀದಿ ಎರಡೂ ಅಕ್ಕ ಪಕ್ಕ ಇದೆ.

ಮಂಗಳವಾರ ಭೈರವ್ ಮಂದಿರದ ರಾಮಲೀಲಾದಲ್ಲಿ ‘ಜಯಂತ್ ನೇತ್ರ ಭಾಗ್’ನಡೆಯುತ್ತಿದ್ದಾಗ ಅದೇ ಸಮಯದಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಾ ಕುರಾನ್ ಪಠಿಸುತ್ತಿದ್ದರು. ಎರಡೂ ಅಕ್ಕಪಕ್ಕದಲ್ಲಿ ನಡೆಯುತ್ತಿದ್ದರೂ ಯಾರಿಗೂ ಯಾವುದೇ ಬಗೆಯ ತಕರಾರಿಲ್ಲ ಎಂದು ಲಾಥ್ ಭೈರವ್ ದೇವಸ್ಥಾನದ ವಕ್ತಾರ ವಿಕಾಸ್ ಯಾದವ್ ಹೇಳಿದ್ದಾರೆ.

ಇದು ನಮ್ಮ ಸಂಸ್ಕೃತಿ, ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸಹಬಾಳ್ವೆಯಿಂದ ಬಾಳುತ್ತಿದ್ದಾರೆ. ನಮಾಜ್ ಮತ್ತು ರಾಮ್‌ಲೀಲಾ ಎರಡೂ ಪ್ರತಿವರ್ಷ ಸಾಮರಸ್ಯದಿಂದ ನಡೆಯುತ್ತದೆ ”ಎಂದು ಮಸೀದಿಯ ಉಸ್ತುವಾರಿ ಅನಿಸೂರ್ ರಹಮಾನ್ ಹೇಳಿದ್ದಾರೆ.

“ಮಂದಿರದಲ್ಲಿ ಪೂಜೆ ಮತ್ತು ಮಸೀದಿಯಲ್ಲಿ 21 ನೇ ರಂಜಾನ್ ರೋಜಾ ಇಫ್ತಾರ್ ಏಕಕಾಲದಲ್ಲಿ ನಡೆಯಿತು ಮತ್ತು ನಾವು ಈ ಸಂಪ್ರದಾಯವನ್ನು ಜೀವಂತವಾಗಿರಿಸಿದ್ದೇವೆ” ಎಂದು ರಹಮಾನ್ ಹೇಳಿದರು.

Leave a Reply