ಇದು ನಮ ಊರು: ತಲೆ ಬರಹ ನೋಡಿ ಆಶ್ಚರ್ಯ ಗೊಂಡ್ರಾ ! ಹೌದು ವಯನಾಡಿನ ಲಕ್ಷ್ಮಿ ಅಮ್ಮನವರ ಮನೆಗೆ ಕೋವಿಡ್ ಕಾವಲುಗಾರನಾಗಿದೆ. ವಯನಾಡಿನ ಮೀನಂಗಡಿ ನಿವಾಸಿ ಲಕ್ಷ್ಮಿ ಅಮ್ಮನವರ ಮೊಮ್ಮಗ ಕಿಚ್ಚು ಗೆ ಕೊರೋನಾ ಸಮಯದಲ್ಲಿ ರಸ್ತೆ ಬದಿಯಲಿ ಒಂದು ಪುಟ್ಟ ನಾಯಿ ಮರಿ ಸಿಕ್ಕಿತ್ತು. ಪುಟ್ಟ ಮರಿಯಾದ ಕಾರಣ ಆ ನಾಯಿ ಮರಿ ನಡೆದಾಡಲು ಕಷ್ಟ ಪಡುತ್ತಿತ್ತು, ಆದ್ದರಿಂದ ಕಿಚ್ಚು ಅದನ್ನು ರಸ್ತೆಯ ಪಕ್ಕದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಮನೆಗೆ ಮರಳಿದನು. ಆದರೆ ಮರುದಿನ ಬೆಳಿಗ್ಗೆ ಕಿಚ್ಚು ಮನೆಯ ಹೊರಗೆ ಬಂದಾಗ ಮನೆಯ ಮುಂದೆ ಅದೇ ನಾಯಿಮರಿ ಬಂದು ನಿಂತಿತ್ತು. ಅದನ್ನು ನೋಡಿ ಕಿಚ್ಚು ಹಾಗು ಮನೆಯವರು ಆಶ್ಚರ್ಯಚಕಿತರಾದರು.

ಆ ದಿನ ಕಿಚ್ಚು ತೋರಿದ ದಯೆಗಾಗಿ ಕೃತಜ್ಞತೆಯನ್ನು ಸಲ್ಲಿಸಲು ಬಂದಿದ್ದ ಆ ನಾಯಿ ಮರಿಗೆ ಲಕ್ಷ್ಮಿ ಅಮ್ಮನವರು ಹಾಲು ಮತ್ತು ಮೀನುಗಳನ್ನು ನೀಡಿದರು. ಅವರು ನಾಯಿಮರಿಯನ್ನು ಮತ್ತೆ ಅವರು ಬೀದಿಗೆ ಕಳುಹಿಸಲಿಲ್ಲ. ಮನೆಯಲ್ಲೇ ಸಾಕಿದರು. ಕೆಲವೇ ದಿನಗಳಲ್ಲಿ, ನಾಯಿ ಮನೆಯ ಪ್ರಿಯತಮೆಯಾಯಿತು. ಇದೀಗ ಆ ನಾಯಿ ಮರಿ ಮನೆಯಲ್ಲಿ ಎಲ್ಲರಿಗು ಇಷ್ಟದ ಸದಸ್ಯನಾಗಿದೆ. ಕೋವಿಡ್ ಕಾಲದಲ್ಲಿ ಮನೆಗೆ ಬಂದ ಅತಿಥಿಯಾದ ಕಾರಣ ಮನೆಯವರು ಆ ಮರಿಗೆ ಕೋವಿಡ್ ಎಂದೇ ಹೆಸರಿಟ್ಟಿದ್ದಾರೆ. ಇದೀಗ ನಾಯಿಮರಿ ಕೋವಿಡ್ ಲಕ್ಷ್ಮಿ ಅಮ್ಮನವರ ಮನೆಗೆ ಕಾವಲುಗಾರನಾಗಿದೆ.

Leave a Reply