ಕಾಂಞಂಗಾಡ್: ಇಲ್ಲಿಗೆ ಸಮೀಪದ ಮಡಿಯನ್ ಅರೆವಲಪ್ ಎಂಬಲ್ಲಿ ಕಣ್ಣಿನ ದೃಷ್ಟಿಹೀನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿ ಕಟ್ಟೆಯ ರಾಡ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ ದಾರುಣ ಘಟನೆ ನಡೆದಿದೆ.

ಕೃಷ್ಣನ್ ಎಂಬವರ ಪತ್ನಿ ಧನಲಕ್ಷ್ಮಿ(50) ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆಯಾಗಿದ್ದಾರೆ. ಕಣ್ಣಿನ ದೃಷ್ಟಿ ಕಡಿಮೆಯಾಗುವ ರೋಗದಿಂದ ಬಳಲುತ್ತಿದ್ದ ಅವರು ಬಹಳ ನೊಂದುಕೊಂಡಿದ್ದರು.

ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಿದ್ಧತೆಯನ್ನು ಮನೆಯವರು ನಡೆಸುತ್ತಿದ್ದರು. ಆದರೆ ಗೃಹಿಣಿ ಅದ್ಯಾವುದಕ್ಕೂ ಕಾಯದೆ ದುಡಿಕಿನ ತೀರ್ಮಾನ ಕೈಗೊಂಡರು. ಮೃತರ ಪತಿ ಕೃಷ್ಣನ್ ಬೇಕರಿ ಮಾಲಕರಾಗಿದ್ದಾರೆ. ಮಕ್ಕಳು ವಿನೇಶ್,ವಿನೀತ್, ಸೊಸೆ ಅಶ್ವತಿ, ಕೃಷ್ಣವಲ್ಲಿ,ಶೈಲಜಾ ಸಹೋದರಿಯರು.

Leave a Reply