ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಗಾಂಜಾ ಸೇವೆನೆಯು ಮದ್ಯ ಸೇವಿಸುವುದಕ್ಕಿಂತಲೂ ಅಪಾಯಕಾರಿಯೆಂದು ಅಧ್ಯಯನವೊಂದು ತಿಳಿಸಿದೆ.

ಇತ್ತೀಚಿನ ಅಧ್ಯಯನವು ಕಂಡುಕೊಂಡ ಪ್ರಕಾರ, ಗಾಂಜಾ ಸೇವನೆಯಿಂದ ಮೆದುಳಿಗೆ ಸಾಕಷ್ಟು ಹಾನಿಯುಂಟಾಗುತ್ತದೆ. ಇದರಿಂದ ಮೆದುಳಿಗೆ ಮೂರು ವರ್ಷ ಹೆಚ್ಚಿಗೆ ವಯಸ್ಸಾಗಿ ವಿವಿಧ ರೀತಿಯ ಮಾನಸಿಕ ಕಾಯಿಲೆಗಳು ಉಧ್ಭವಿಸುತ್ತದೆ. ಇದು ಮದ್ಯಪಾನಕ್ಕಿಂತ ಅಪಾಯಕಾರಿಯಾಗಿದೆ. ಕ್ಯಾನಬಿಸ್ ಗಾಂಜಾ ಸೇವನೆಯು ಬಹುತೇಕ ನಮ್ಮ ಮೆದುಳನ್ನು ಹಾನಿ ಗೊಳಿಸುತ್ತದೆ ಎಂದು ಅಧ್ಯಯನವು ತಿಳಿಸುತ್ತದೆ.

ಜರ್ನಲ್ ಆಫ್ ಆಲ್ಝೈಮರ್’ಸ್ ಡಿಸೀಸ್ನಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶಗಳು ಕೆಳಗೆ ಪಟ್ಟಿ ಮಾಡಲಾಗಿದ್ದು ಅವು ಯಾವ ರೀತಿಯ ಕಾಯಿಲೆಗಳನ್ನು ತಂದೊಡ್ಡಬಹುದು ಎಂದು ಹೇಳಲಾಗಿದೆ.

-ಸ್ಕಿಜೋಫ್ರೇನಿಯಾ (ಅಕಾಲಿಕ ವಯಸ್ಸಾದ 4 ವರ್ಷಗಳ ಸರಾಸರಿ)

-ಮರಿಜುವಾನಾ ಬಳಕೆ (2.8 ವರ್ಷಗಳು)

ಬೈಪೋಲಾರ್ ಡಿಸಾರ್ಡರ್ (1.6 ವರ್ಷಗಳು)

-ಲೇಖನ-ಕೊರತೆ / ಹೈಪರ್ಆಕ್ಟಿವಿಟಿ ಡಿಸಾರ್ಡರ್ (1.4 ವರ್ಷಗಳು)

-ಆಲ್ಕೊಹಾಲ್ (0.6 ವರ್ಷಗಳು)

“ಗಾಂಜಾದ ದುಷ್ಪರಿಣಾಮದ ಬಗ್ಗೆ ಸಮಾಜವು ಬಹಳ ಗಂಭೀರವಾಗಿ ಚಿಂತಿಸಬೇಕು ಎಂದು ಅಮನ್ ಕ್ಲಿನಿಕ್ ಸಂಸ್ಥಾಪಕರಾದ ಡಾ. ಡೇನಿಯಲ್ ಅಮನ್ ಹೇಳಿದ್ದಾರೆ.

Leave a Reply