1. ನಿಮ್ಮ ಕೋಪಕ್ಕೆ ಕಾರಣವಾಗುವ ವಿಷಯಗಳ ಕುರಿತು ನಾವು ಆರಾಮ ವಾಗಿರುವ ಸಮಯದಲ್ಲಿ ಆತ್ಮಾವಲೋಕನ ನಡೆಸಿಕೊಳ್ಳಿ. ಇದಕ್ಕೆ ಕುಟುಂಬ ಸದಸ್ಯರ, ಗೆಳೆಯರ ಸಹಾಯ ಪಡೆದುಕೊಳ್ಳಿ.

2. ಕೋಪ ಆರಂಭವಾಗುತ್ತಿದೆ ಯೆಂಬ ಅರಿವಾದೊಡನೆ ದೀರ್ಘವಾಗಿ ಶ್ವಾಸ ಎಳೆದುಕೊಳ್ಳುತ್ತಲೂ ಹೊರಗೆ ಬಿಡುತ್ತಲೂ ಇರಿ. ಅದನ್ನು ಪುನರಾವರ್ತಿಸುತ್ತಾ ಇರಿ.

3. ಕೋಪದಿಂದ ಶಾರೀರಿಕ ಬದಲಾವಣೆಯಾಗುವ ಭಾಗಗಳನ್ನು ತಡವಿರಿ. ತಲೆನೋವಾದರೆ ಹಣೆಗೆ ಮಸಾಜ್ ಮಾಡಿರಿ. ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.

4. ಕೋಪ ಆರಂಭವಾಗುವಾಗ ಸಾವಕಾಶವಾಗಿ ಒಂದು ಎರಡು ಹೀಗೆ ನೂರರ ವರೆಗೆ ಮತ್ತು ನೂರರಿಂದ ಒಂದರವರೆಗೆ ಎಣಿಸುತ್ತಾ ಇರಿ. ಅಗತ್ಯ ವಿದ್ದರೆ ಪುನರಾವರ್ತಿಸಿ.

5. ಆರೋಗ್ಯಕರ ರೀತಿಯಿಂದ ಕೋಪವನ್ನು ಪ್ರಕಟಿಸಲು ಬೇರೆ ಮಾರ್ಗವನ್ನು ನೋಡಿಕೊಳ್ಳಿ. ವಾದ್ಯ ಸಂಗೀತವನ್ನು ಆಸ್ವಾದಿಸಬಹುದು. ಚಿತ್ರ ರಚನೆ ಮಾಡಬಹುದು. ಕೆಲವರು ಇಂತಹ ಸಂದರ್ಭದಲ್ಲಿ ಪತ್ರ ಬರೆಯುವುದೂ ಇದೆ.

6. ಕೋಪದಿಂದಾಗುವ ಗುಣ ದೋಷಗಳ ಒಂದು ಪಟ್ಟಿ ತಯಾರಿಸಿ. ಕೋಪ ಇಳಿದ ಸಂದರ್ಭದಲ್ಲಿ ಅದನ್ನು ಓದುತ್ತಾ ಇರಿ.

7. ಹಾಸ್ಯ ಮನೋಭಾವವನ್ನು ರೂಢಿಸಿಕೊಳ್ಳಿ. ಹಾಸ್ಯಬರಹ, ಕಾರ್ಟೂನ್ ಗಳನ್ನು ಆಸ್ವದಿಸಿ ನಿಮ್ಮನ್ನು ಹಾಸ್ಯ ಭಾವದಿಂದ ಕಾಣಲು ಪ್ರಯತ್ನಿಸಿ.

8. ಕೋಪ ಪ್ರಕಟನೆಗೆ ಸಾಧ್ಯತೆ ಇಲ್ಲದಂತಾಗಲು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಜೋರಾಗಿ ಹಾಡುವುದು, ಶಟ್ಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಟೆನಿಸ್ ಮುಂತಾದ ಆಟಗಳನ್ನು ಆಡುವುದು, ಈಜುವುದು ಇವೆಲ್ಲಾ ಕೋಪದ ವ್ಯಾಪ್ತಿಯನ್ನು ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.

9. ಕೌನ್ಸೆಲರ್, ಸೈಕೋಲಜಿಸ್ಟ್, ಯೋಗ ಶಿಕ್ಷಕರು ಮೊದಲಾದ ಪ್ರೊಫೆಶನಲ್‍ಗಳ ಸಹಾಯದೊಂದಿಗೆ ಕೋಪ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೊಫೆಶನಲ್‍ರ ಮೇಲ್ನೋಟದಲ್ಲಿ ರಿಲ್ಯಾಕ್ಸೇಶನ್ ಥೆರಪಿ ಅಭ್ಯಾಸ ಮಾಡಿಕೊಳ್ಳಿ.

10. ಕೋಪ ಬಂದಿದ್ದರೆ ತಮ್ಮನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸಿ. ನಿಂತಿದ್ದರೆ ಕೂತುಕೊಳ್ಳಿ, ಕೂತುಕೊಂಡಿದ್ದರೆ ಮಲಗಿ ಅಥವಾ ಕೈ ಕಾಲುಗಳನ್ನು ತೊಳೆಯಿರಿ.

Leave a Reply