Representational Image

ಬೇಕಾಗುವ ಸಾಮಗ್ರಿ

ಹಸಿರು ಆ್ಯಪಲ್, (ಕೆಂಪು ಕೂಡ ಆಗುತ್ತದೆ) – 3 ಬೆಣ್ಣೆ – 3 ಟೀ ಸ್ಪೂ. ಸಕ್ಕರೆ – 4 ಟೀ ಸ್ಪೂ. ಬ್ರೆಡ್ ಹುಡಿ – 2 ಕಪ್, ಕ್ರೀಮ್ – 2 ಟೀ ಸ್ಪೂ. ಆಪಲ್ ತುಂಡು – 1 ಕಪ್

ಮಾಡುವ ವಿಧಾನ: –

ಆಪಲ್ ಸಿಪ್ಪೆ ಸುಲಿದು, ತುಂಡು ಮಾಡಿ. ತುಂಡುಗಳನ್ನು ನೀರಿಲ್ಲದ ಪಾತ್ರೆಯಲ್ಲಿ ಇಟ್ಟು ಬೇಯಿಸಿ (ಸಣ್ಣ ಉರಿಯಲ್ಲಿ). ಬೆಣ್ಣೆ ಬಿಸಿ ಮಾಡಿ 2 ಟೀ ಸ್ಪೂ ಸಕ್ಕರೆ ಸೇರಿಸಿ, ಸಕ್ಕರೆ ಕರಗಿದಾಗ 1 ಕಪ್ ಬ್ರೆಡ್ ಹುಡಿ ಹಾಕಿ, ಸ್ವಲ್ಪ ಬಣ್ಣ ಬದಲಿಸುವ ತನಕ ಹುರಿಯಿರಿ. ಉಳಿದ ಬ್ರೆಡ್ ಹುಡಿಯನ್ನು, ಬೇಕ್ ಮಾಡುವ ಡಿಶ್‌ಗೆ ಹಾಕಿ ಹರಡಿಸಿ, ಬೇಯಿಸಿದ ಆಪಲನ್ನು ಒಳ್ಳೆ ಜಜ್ಜಿ, ಅದಕ್ಕೆ ಬೆಣ್ಣೆ ಮಿಶ್ರಣವನ್ನು ಸೇರಿಸಿ ಬೇಯಿಸಿ. ಈ ಮಿಶ್ರಣವನ್ನು, ಬ್ರೆಡ್ ಹುಡಿಯನ್ನು ಹರಡಿದ ಡಿಶ್‌ನ ಮೇಲೆ ಹರಡಿ, ಕೈಯಲ್ಲಿ ಒತ್ತಿ. ಇನ್ನು ಒವನ್‌ನಲ್ಲಿ ಇಟ್ಟು 15 ನಿಮಿಷಗಳ ಕಾಲ ಬೇಕ್ ಮಾಡಿ ಅಥವಾ ಬಣ್ಣ ಬದಲಾಗುವ ತನಕ ಬೇಕ್ ಮಾಡಿ. ಕ್ರೀಂ ಮತ್ತು ಆಪಲ್ ತುಂಡುಗಳೊಂದಿಗೆ ಅಲಂಕರಿಸಿ ತಿನ್ನಲು ಕೊಡಿ.

Leave a Reply