ಬೇಕಾಗುವ ಸಾಮಗ್ರಿಗಳು:

ಉಗುರು ಬೆಚ್ಚಗೆ ನೀರು- 1-2 ಕಪ್, ಈಸ್ಟ್- 1 ಟೀ.ಸ್ಪೂ., ಸಕ್ಕರೆ- 1 ಟೀ.ಸ್ಪೂ.,  ಹಾಲಿನ ಹುಡಿ- 2 ಟೀ.ಸ್ಪೂ., ಮೊಟ್ಟೆ- 2,
ಉಪ್ಪು- ರುಚಿಗೆ, ಮೈದ- 1.1/4 ಕಪ್, ಕರಿ ಎಳ್ಳು- 3 ಟೀ.ಸ್ಪೂ., ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.

ತಯಾರಿಸುವ ವಿಧಾನ:

ಈಸ್ಟ್, ಸಕ್ಕರೆ ಯನ್ನು ನೀರಿನಲ್ಲಿ ಕರಗಿಸಿ ಹತ್ತು ನಿಮಿಷ ಇಡಿ. ಇದಕ್ಕೆ ಒಂದು ಮೊಟ್ಟೆ, ಹಾಲಿನ ಹುಡಿ
ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಉಪ್ಪು, ಮೈದ ಹುಡಿ ಸೇರಿಸಿ. ಚಪಾತಿ ಹಿಟ್ಟಿನ ಹದಕ್ಕೆ  ಕಲಸಿ. 4 ಗಂಟೆ ಹಾಗೆಯೇ ಇರಲಿ. ಚಪಾತಿಗೆ
ಮಾಡುವಂತೆ ಹಿಟ್ಟಿನ ಉಂಡೆ ತಯಾರಿಸಿ, ಪೂರಿಯ ಗಾತ್ರಕ್ಕೆ ಲಟ್ಟಿಸಿ (ಸ್ವಲ್ಪ ದಪ್ಪಗಿರಲಿ) ಮೊಟ್ಟೆಯನ್ನು ಕಲಸಿಟ್ಟು ಅದಕ್ಕೆ ಕೈ ಮುಳುಗಿಸಿ
ಎಳ್ಳಿನ ಮೇಲೆ ಅದೇ ಕೈ ತಾಗಿಸಿ ತಯಾರಿಸಿಟ್ಟ ಪೂರಿ ಹಿಟ್ಟಿನ ಮೇಲೆ ತಡವಿ ಬಿಸಿಯಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

-Representational Image

Leave a Reply